Published
3 months agoon
By
Akkare News
ಬೆಂಗಳೂರಿನಿಂದ ಮಾದಕ ವಸ್ತು (MDMA) ಯನ್ನು ತಂದು ಮಂಗಳೂರಿನ ಡ್ರಗ್ ಪೆಡ್ಲರ್ ಗಳಿಗೆ ಸರಬರಾಜು ಮಾಡುತ್ತಿದ್ದಂತಹ ತಂಡವನ್ನು ಮಂಗಳೂರು ನಗರದ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂಧಿಗಳು ದಿನಾಂಕ:13.12.2025 ರಂದು ಕಾರಿನಲ್ಲಿ ಬರುತ್ತಿದ್ದ ಅಹಮ್ಮದ್ ಶಾಬೀತ್, ಮತ್ತು ಆತನ ತಂಡವನ್ನು ಅರ್ಕುಳ ಬಳಿ ವಶಕ್ಕೆ ಪಡೆದು ದಸ್ತಗಿರಿ ಮಾಡಲಾಗಿರುತ್ತದೆ.


ದಸ್ತಗಿರಿಯಾದ ಆರೋಪಿಗಳು
1. ಅಹಮ್ಮದ್ ಶಾಬೀತ್ ಪ್ರಾಯ: 35 ವರ್ಷ, ತಂದೆ: ಎಸ್. ಅಬ್ದುಲ್ ರಜಾಕ್, ವಾಸ: # 1-196 A, ಬದ್ರಿಯಾ ನಗರ ಹೌಸ್, ಮಲ್ಲೂರು ಪೋಸ್ಟ್ ಮತ್ತು ಗ್ರಾಮ, ಮಂಗಳೂರು. ಹಾಲಿ ವಾಸ: ಪಿಕ್ ಅಪ್ ಜಬ್ಬಾರ್ ರವರ ಬಾಡಿಗೆ, ಶಾಂತಿ ಅಂಗಡಿ, ಜೋಡು ಮಾರ್ಗ ಪೋಸ್ಟ್, ಕೈಕಂಬ, ಬಿ.ಸಿ.ರೋಡ್, ಮಂಗಳೂರು
2. ಮಹಮ್ಮದ್ ಶಂಶೀರ್ ಪ್ರಾಯ: 36 ತಂದೆ: ಎಸ್ ಅಹಮ್ಮದ್ ವಾಸ: ನಂಬರ್: 14-48, ಮದ್ದ ಪರ್ಲಿಯಾ ಹೌಸ್ ಬಿ ಮೂಡ ಗ್ರಾಮ, ಜೋಡುಮಾರ್ಗ ಪೋಸ್ಟ್, ಬಂಟ್ವಾಳ ತಾಲೂಕು
3. ಶ್ರೀಮತಿ ನೌಶೀನ, ಪ್ರಾಯ: 27 ವರ್ಷ, ತಂದೆ: ಉಮರಬ್ಬ, ವಾಸ: ಮಠದಬೆಟ್ಟು ಹೌಸ್, ಸರಪಾಡಿ ಪೋಸ್ಟ್ ಮತ್ತು ಗ್ರಾಮ, ಬಂಟ್ವಾಳ ತಾಲೂಕು, ದ.ಕ.ಜಿಲ್ಲೆ
ಆರೋಪಿಗಳಿಂದ ವಶಪಡಿಸಿಕೊಂಡು ಸ್ವತ್ತುಗಳು
1. MDMA ಮಾದಕ ವಸ್ತು 90 ಗ್ರಾಂ ಮೌಲ್ಯ
2. ಬಿಳಿ ಬಣ್ಣದ KL-58-W-6342 ಮಾರುತಿ ಸ್ವಿಪ್ಟ್ ಕಾರು ಮತ್ತು ಮೊಬೈಲ್ ಪೋನ್ ಗಳು


ಅಹಮ್ಮದ್ ಶಾಬೀತ್ ಎಂಬುವನು ಮಂಗಳೂರಿನ ಡ್ರಗ್ ಪೆಡ್ಲರ್ ಗಳಿಗೆ ನಿರಂತರವಾಗಿ ಬೆಂಗಳೂರಿನಿಂದ ಮಾದಕ ವಸ್ತುವಾದ MDMA ಯನ್ನು ತಂದು ಸರಬರಾಜು ಮಾಡುತ್ತಿದ್ದು, ಅಲ್ಲದೇ ಈ ತಂಡದಲ್ಲಿ ಯಾರಿಗೂ ಅನುಮಾನ ಬಾರದಂತೆ ಮಹಿಳೆಯಾದ ಶ್ರೀಮತಿ ನೌಶಿನ ಎಂಬವರನ್ನು ಜೊತೆಗೆ ಇರಿಸಿಕೊಂಡು ಮಾದಕ ವಸ್ತುವಾದ MDMA ಯನ್ನು ಸಾಗಾಟ ಮಾಡುತ್ತಿರುವುದ್ದನ್ನು, ಮಂಗಳೂರು ನಗರದ ಸಿಸಿಬಿ ಘಟಕದ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳು ಖಚಿತ ಮಾಹಿತಿಯನ್ನು ಕಲೆ ಹಾಕಿ, ಈ ತಂಡವನ್ನು ಈ ದಿನ ದಸ್ತಗಿರಿ ಮಾಡಿರುತ್ತಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿತರಿಗೆ ನ್ಯಾಯಾಂಗ ಬಂಧನವಾಗಿರುತ್ತದೆ.
ತನಿಖೆ ಮುಂದುವರೆದಿದೆ.








