Connect with us

ಸ್ಥಳೀಯ

ದಕ್ಷಿಣ ಆಫ್ರಿಕಾದ ಮಾಡೆಲ್ ಫೋಟೋಗೆ ಲೈಕ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರನ್ ಮಷೀನ್ ವಿರಾಟ್‌ ಕೊಹ್ಲಿ

Published

on

ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುತ್ತಿರುವ ವಿರಾಟ್ ಕೊಹ್ಲಿ ಅವರು ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳಿಗೆ ಸಂಭ್ರಮದ ರಸದೌತಣ ಬಡಿಸುತ್ತಿದ್ದಾರೆ. ಮತ್ತೊಂದೆಡೆ, ಈ ನಡುವೆಯೇ ಅವರು ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ‘ಲೈಕ್’ ವಿವಾದಕ್ಕೆ ಸಿಲುಕಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

  ಇತ್ತೀಚೆಗೆ ಮಾಡೆಲ್ ಲಿಜ್‌ಲಾಜ್ ಎಂಬುವವರ ಇನ್‌ಸ್ಟಾಗ್ರಾಮ್ ಪೋಸ್ಟ್‌ವೊಂದಕ್ಕೆ ವಿರಾಟ್ ಕೊಹ್ಲಿ ಅವರ ಅಧಿಕೃತ ಪ್ರೊಫೈಲ್‌ನಿಂದ ಲೈಕ್ ಬಂದಿರುವುದು ಅಭಿಮಾನಿಗಳ ಕಣ್ಣಿಗೆ ಬಿದ್ದಿದೆ. ಕೂಡಲೇ ಇದರ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ.

 

ಅವನೀತ್ ಕೌರ್ ವಿಚಾರಕ್ಕೂ ಭಾರಿ ವೈರಲ್ ಇದು ಕೊಹ್ಲಿ ಅವರಿಗೆ ಹೊಸದೇನಲ್ಲ, 2025ರಲ್ಲಿ ಭಾರತೀಯ ಮಾಡೆಲ್ ಮತ್ತು ಇನ್‌ಫ್ಲುಯೆನ್ಸರ್ ಅವನೀತ್ ಕೌರ್ ಅವರ ಫೋಟೋವೊಂದನ್ನು ಕೊಹ್ಲಿ ಅಚಾತುರ್ಯದಿಂದ ಲೈಕ್ ಮಾಡಿದ್ದರು. ಅಂದು ಆ ವಿಚಾರ ದೊಡ್ಡ ಮಟ್ಟದ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿತ್ತು. ಆ ಸಮಯದಲ್ಲಿ ಕೊಹ್ಲಿ ಅವರು ಸ್ವತಃ ಸ್ಪಷ್ಟನೆಯನ್ನೂ ನೀಡಬೇಕಾಗಿ ಬಂದಿತ್ತು.

ಕೊಹ್ಲಿ ಅಭಿಮಾನಿಗಳು ಇದನ್ನು ಕೇವಲ ತಾಂತ್ರಿಕ ದೋಷ ಅಥವಾ ಅಲ್ಗಾರಿದಮ್ ಸಮಸ್ಯೆ ಎಂದು ಕರೆಯುತ್ತಿದ್ದಾರೆ. ಮತ್ತೊಂದೆಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್‌ ತಂಡದ ಸ್ಟಾರ್ ಆಟಗಾರನ ಪ್ರೊಫೈಲ್‌ನಲ್ಲಿ ಪದೇ ಪದೇ ಇಂತಹ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಅವರ ಬೆಂಬಲಿಗರು ವಾದಿಸುತ್ತಿದ್ದಾರೆ.

ಲಿಜ್‌ಲಾಜ್’ ಇನ್‌ಸ್ಟಾ ಪೋಸ್ಟ್‌ಗೆ ಲೈಕ್, ಭಾರಿ ವೈರಲ್ ಇನ್‌ಸ್ಟಾಗ್ರಾಮ್‌ನಲ್ಲಿ ಆ ಒಂದು ಲೈಕ್ ಕಂಡ ತಕ್ಷಣವೇ, ಕೆಲವೇ ಸೆಕೆಂಡುಗಳಲ್ಲಿ ಅದರ ಸ್ಕ್ರೀನ್‌ಶಾಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಕಡೆ ಹರಿದಾಡಲಾರಂಭಿಸಿದವು. ನೋಡನೋಡುತ್ತಿದ್ದಂತೆಯೇ ಒಂದು ಲೈಕ್‌ ಇಡೀ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ ವೈರಲ್ ಮೊಮೆಂಟ್ ಆಗಿ ಬದಲಾಯಿತು. ಈ ಇಡೀ ಘಟನೆ ಮತ್ತು ಅದರ ಸುತ್ತ ನಡೆಯುತ್ತಿರುವ ಚರ್ಚೆಯನ್ನು ಕಂಡು ಅನೇಕ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಮೀಮ್‌ಗಳ ಮೂಲಕ ಲೇವಡಿ ಮಾಡುತ್ತಿದ್ದಾರೆ.

ಒಂದು ಸಣ್ಣ ಲೈಕ್ ಇಷ್ಟೊಂದು ದೊಡ್ಡ ಸುದ್ದಿಯಾಗಬೇಕೆ ಎಂಬ ಬಗ್ಗೆ ಒಂದು ಕಡೆ ಟೀಕೆಗಳು ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ, ಇದನ್ನು ತಮಾಷೆಯಾಗಿ ತೆಗೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. ಸೆಲೆಬ್ರಿಟಿಗಳ ಪ್ರತಿಯೊಂದು ಇಂತಹ ಹೆಜ್ಜೆಯ ಮೇಲೆ ಜನರ ಕಣ್ಣು ಹೇಗಿರುತ್ತದೆ ಮತ್ತು ಅದು ಎಷ್ಟು ಬೇಗ ವೈರಲ್ ಆಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಅಭಿಮಾನಿಗಳು ಹೇಳೋದೇನು? “ಈ ಸಮಾಜ ನೆಮ್ಮದಿಯಾಗಿ ಒಂದು ಲೈಕ್ ಕೂಡ ಮಾಡೋಕೆ ಬಿಡಲ್ಲ,” ಎಂದು ಒಬ್ಬ ಅಭಿಮಾನಿ ವ್ಯಂಗ್ಯವಾಗಿ ಬರೆದಿದ್ದಾರೆ. “ಸಮಾಧಾನ ಮಾಡಿಕೊಳ್ಳಿ ಗೆಳೆಯರೇ, ಇದು ಕೇವಲ ಅಲ್ಗಾರಿದಮ್ ಸಮಸ್ಯೆ ಅಷ್ಟೇ,” ಎಂದು ಮತ್ತೊಬ್ಬರು ಸಮರ್ಥಿಸಿಕೊಂಡಿದ್ದಾರೆ. ಅವನೀತ್ ಕೌರ್ ಪ್ರಕರಣದಲ್ಲಿ ಕೊಹ್ಲಿ ಸ್ಪಷ್ಟನೆ ಹಿಂದೆ ಇಂತಹದ್ದೇ ಘಟನೆ ನಡೆದಾಗ ಕೊಹ್ಲಿ ಅವರು ಅಧಿಕೃತ ಹೇಳಿಕೆ ನೀಡುವ ಮೂಲಕ ತೆರೆ ಎಳೆದಿದ್ದರು. “ನನ್ನ ಫೀಡ್ ಅನ್ನು ಕ್ಲಿಯರ್ ಮಾಡುವ ಸಂದರ್ಭದಲ್ಲಿ, ಅಲ್ಗಾರಿದಮ್ ಅಚಾತುರ್ಯದಿಂದ ಲೈಕ್‌ ಆಗಿದೆ. ಇದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲ. ದಯವಿಟ್ಟು ಯಾರೂ ಅನಗತ್ಯ ಊಹೆಗಳನ್ನು ಮಾಡಬೇಡಿ ಎಂದು ವಿನಂತಿಸುತ್ತೇನೆ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು,” ಎಂದು ಹೇಳುವ ಮೂಲಕ ಸ್ಪಷ್ಟನೆ ನೀಡಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement