Published
9 hours agoon
By
Akkare News
ಮಕ್ಕಳು ಟ್ಯಾಂಕ್ ಹತ್ತಿ ವೀಡಿಯೊ ಚಿತ್ರೀಕರಿಸಿದ ನಂತರ ಕೆಳಗೆ ಇಳಿಯಲು ಪ್ರಯತ್ನಿಸುತ್ತಿದ್ದಾಗ, ಅವರ ಭಾರಕ್ಕೆ ಏಣಿಯು ಏಕಾಏಕಿ ಕುಸಿದುಬಿದ್ದಿದೆ. ಈ ವೇಳೆ ಮೂವರು ಮಕ್ಕಳು ಸುಮಾರು 50 ಅಡಿ ಎತ್ತರದಿಂದ ನೇರವಾಗಿ ನೆಲಕ್ಕೆ ಬಿದ್ದರು. 13 ವರ್ಷದ ಸಿದ್ಧಾರ್ಥ್ ಎಂಬ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಏಣಿ ಬಿದ್ದ ಕಾರಣ ಉಳಿದ ಇಬ್ಬರು ಮಕ್ಕಳು 60 ಅಡಿ ಎತ್ತರದ ಟ್ಯಾಂಕ್ ಮೇಲೆ ಸಿಲುಕಿಕೊಂಡರು. ಸ್ಥಳೀಯರು ಮತ್ತು ಅಧಿಕಾರಿಗಳು ರಕ್ಷಣೆಗೆ ಮುಂದಾದರೂ ಸವಾಲುಗಳು ಎದುರಾದವು.ಕ್ರೇನ್ ಮತ್ತು ದೊಡ್ಡ ಯಂತ್ರಗಳು ಸ್ಥಳಕ್ಕೆ ತಲುಪಲು ಜೌಗು ಭೂಮಿ ಅಡ್ಡಿಯಾಯಿತು. ಮಳೆಯ ಕಾರಣದಿಂದ ಎಲ್ಲರ ಪ್ರಯತ್ನವೂ ವಿಫಲವಾಗಿತ್ತು.
‘ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾರತೀಯ ವಾಯುಪಡೆಯ ನೆರವು ಪಡೆಯಲು ಸೂಚಿಸಿದ್ದಾರೆ. ರಾತ್ರೋರಾತ್ರಿ ಆರಂಭವಾದ ಈ ಕಾರ್ಯಾಚರಣೆಗೆ Mi-17 V5 ಹೆಲಿಕಾಪ್ಟರ್ ಅನ್ನು ಬಳಸಲಾಯಿತು. ಕತ್ತಲೆ ಮತ್ತು ಮಳೆಯ ನಡುವೆಯೂ ವಾಯುಪಡೆಯ ಸಿಬ್ಬಂದಿ ಇಬ್ಬರನ್ನು ರಕ್ಷಿಸಿದ್ದಾರೆ.
ಸುಮಾರು 16 ಗಂಟೆಗಳ ನಿರಂತರ ಪ್ರಯತ್ನದ ನಂತರ, ಬೆಳಗ್ಗೆ 5.20 ರ ಸುಮಾರಿಗೆ ಟ್ಯಾಂಕ್ ಮೇಲಿದ್ದ ಇಬ್ಬರು ಯುವಕರನ್ನು ಸುರಕ್ಷಿತವಾಗಿ ಏರ್ಲಿಫ್ಟ್ ಮಾಡಲಾಯಿತು. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಎಸ್ಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ರಾತ್ರಿಯಿಡೀ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿದ್ದರು.


