Published
9 hours agoon
By
Akkare News
ಬೆಂಗಳೂರು: ʼಮೊಗ್ಗಿನ ಮನಸ್ಸುʼ ಚೆಲುವೆ, ‘ಬಿಗ್ ಬಾಸ್’ ಖ್ಯಾತಿಯ ಶುಭಾ ಪೂಂಜಾ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ.
ಮದುವೆಯಾದ ನಾಲ್ಕೇ ವರ್ಷದಲ್ಲಿ ಅವರು ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಶುಭಾ ಪೂಂಜಾ ಹಾಗೂ ಅವರ ಪತಿ ಸುಮಂತ್ ಬಿಲ್ಲವ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಸಂತಸದಿಂದ ಸಂಸಾರ ನಿಭಾಯಿಸುತ್ತಿದ್ದ ದಂಪತಿಗ ನಡುವೆ ಇದ್ದಕ್ಕಿದ್ದಂತ ಮನಸ್ತಾಪ ಉಂಟಾಗಲು ಕಾರಣಗಳೇನು ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ.

2022ರಲ್ಲಿ ಉದ್ಯಮಿ ಸುಮಂತ್ ಬಿಲ್ಲವ ಅವರನ್ನು ಪ್ರೀತಿಸಿ ಶುಭಾ ಮದುವೆಯಾಗಿದ್ದರು. ಇಬ್ಬರು ಖುಷಿಯಾಗಿ ಜತೆಯಲ್ಲಿದ್ದರು. ಆದರೆ ಇದೀಗ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಮುಂದಿನ ವಿಚಾರಣೆ ಇಬ್ಬರು ಒಟ್ಟು ಕೋರ್ಟ್ಗೆ ಹಾಜರಾಗುವ ಸಾಧ್ಯತೆಯಿದೆ. ಇತ್ತ ಶುಭಾ ಪತಿ ಜತೆಗಿನ ಫೋಟೋವನ್ನು ಎಲ್ಲಾ ಕಡೆಯಿಂದ ಡಿಲೀಟ್ ಮಾಡಿದ್ದಾರೆ.
ʼಮೊಗ್ಗಿನ ಮನಸ್ಸುʼ, ʼಸ್ಲಂ ಬಾಲʼ, ʼಪರಾರಿʼ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ಶುಭಾ ನಟಿಸಿದ್ದು, ʼಬಿಗ್ ಬಾಸ್ʼ ಸೀಸನ್ 8ರಲ್ಲಿ ವೀಕ್ಷಕರ ಗಮನ ಸೆಳೆದಿದ್ದರು.





