Published
3 hours agoon
By
Akkare News
ಸಾಂದೀಪನಿ ವಿದ್ಯಾ ಸಂಸ್ಥೆ ಯಶಸ್ವಿ 25 ಸಂವತ್ಸರ ಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಕೌಶಲ್ಯಗಳ ಅಭಿವೃದ್ಧಿಯ ಜತೆಗೆ ವ್ಯಕ್ತಿತ್ವ ವಿಕಸನ ತರಬೇತಿ ಸರಣಿ ಕಾರ್ಯಾಗಾರ ‘ ರಜತ ಪಲ್ಲವ ‘ದ ಮೊದಲ ಕಾರ್ಯಕ್ರಮ ನಡೆಯಿತು. 
ಸಂಪನಿಮ್ಮೂಲ ವ್ಯಕ್ತಿಗಳಾದ ಜೆಸಿಐ ರಾಷ್ಟ್ರೀಯ ತರಬೇತುದಾರರಾದ ಜೆಸಿ ಸುಹಾಸ್ ಮರಿಕೆ ಇವರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಮೊದಲನೆಯ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ ನಡೆಯಿತು. ಈ ತರಬೇತಿಯಲ್ಲಿ ಪ್ರಮುಖವಾಗಿ ಟೀಮ್ ವರ್ಕ್ ನ ಮಹತ್ವ, ನಿರ್ದಿಷ್ಟ ಗುರಿಯ ಅಗತ್ಯ ಮತ್ತು ಅದನ್ನು ಸಾಧಿಸುವ ಬಗ್ಗೆ ವಿವಿಧ ಚಟುವಟಿಕೆಗಳನ್ನು ಒಳಗೊಂಡಿದ್ದವು. 
ತರಬೇತಿ ಕಾರ್ಯಕ್ರಮದ ಸoಯೋಜಕರಾದ ಸಹ ಶಿಕ್ಷಕರಾದ ಶ್ರೀ ಆನಂದ್ ಆರ್ ರವರು ಕಾರ್ಯಕ್ರಮದ ಗುರಿ ಮತ್ತು ಉದ್ದೇಶಗಳನ್ನು ವಿವರಿಸಿ, ಸಂಪನ್ಮೂಲವ್ಯಕ್ತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಸ್ವಾಗತಿಸಿದರು. ಸಹ ಶಿಕ್ಷಕಿ ಶ್ರೀಮತಿ ಉಷಾ ಇವರು ವಂದಿಸಿದರು. 




