ಪುತ್ತೂರು :: ಪುರುಷರಕಟ್ಟೆಯಲ್ಲಿ ಯುವತಿಯನ್ನು ಬೆದರಿಸುವ ಯಾವುದೇ ಘಟನೆ ನಡೆಯದಿದ್ದರೂ, ಬಿಜೆಪಿ ಈ ಘಟನೆಯ ಮೂಲಕ ಕೋಮ ಉದ್ವಿಗ್ನತೆ ಸೃಷ್ಠಿಸಲು ಪ್ರಯತ್ನಿಸಿದೆ ಎಂದು ಮುಸ್ಲಿಂ ಯುವಜನ ಒಕ್ಕೂಟದ ದಕ್ಷಿಣಕನ್ನಡ ಜಿಲ್ಲಾಧ್ಯಕ್ಷ ಅಶ್ರಫ್ ಕಲ್ಲೇಗ ಆರೋಪಿಸಿದ್ದಾರೆ. ತನ್ನ ಮೇಲೆ ಯುವಕನೋರ್ವ ಚೂರಿ ಹಿಡಿದು ಬೆದರಿಸಿದ್ದಾನೆ ಎಂದು ಯುವತಿ ಪೋಲೀಸ್ ಠಾಣೆಗೆ ದೂರು ನೀಡಿದ ಸಂದರ್ಭದಲ್ಲಿ ಪೋಲೀಸರು ದೂರು ಸ್ವೀಕರಿಸಿದ ಅದರ ಸತ್ಯಾಸತ್ಯತೆಯನ್ನು ಪತ್ತೆಹಚ್ಚಿದ್ದಾರೆ.
ಅಂತಹ ಯಾವುದೇ ಘಟನೆ ನಡೆದಿಲ್ಲ ಎನ್ನುವುದು ಸಿಸಿ ಕ್ಯಾಮರಾ ವಿಡಿಯೋದಲ್ಲಿ ಸ್ಪಷ್ಟವಾಗಿದ್ದು, ಯುವತಿಯ ಅಂದು ಮಂಗಳೂರಿಗೆ ತೆರಳಿ ಬಳಿ ಸಂಜೆ ವೇಳೆಗೆ ದೂರು ನೀಡಿದ್ದಾಳೆ. ಈ ಸಂದರ್ಭದಲ್ಲಿ ಹಿಂದೂ ಸಂಘಟನೆ ಮತ್ತು ಬಿಜೆಪಿಯ ಮುಖಂಡರೂ ಇದ್ದು, ಘಟನೆಗೆ ಕೋಮು ಬಣ್ಣ ನೀಡಲು ಯತ್ನಿಸಿದ್ದಾರೆ. ದಕ್ಷಿಣಕನ್ನಡ ಪೋಲೀಸ್ ವರಿಷ್ಠಾಧಿಕಾರಿ ಈ ಪ್ರಕರಣದ ಸೂಕ್ತ ತನಿಖೆ ನಡೆಸಿ ಸುಳ್ಳು ಆರೋಪ ಮಾಡಿದ ಯುವತಿ, ಆಕೆಯ ಪೋಷಕರ ಮೇಲೆಯೂ ದೂರು ದಾಖಲಿಸಿರುವುದ ಸರಿಯಾದ ಕ್ರಮ ಎಂದ ಅವರು ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಾಕಷ್ಟು ಹಿಂದೂ ಹೆಣ್ಣು ಮಕ್ಕಳಿಗೆ ಅನ್ಯಾಯವಾದಾಗ ತುಟಿ ಬಿಚ್ಚದ ಬಿಜೆಪಿ ನಾಯಕರು ಈ ಪ್ರಕರಣವನ್ನು ಕೋಮು ಉದ್ವಿಗ್ನತೆ ಸೃಷ್ಟಿಸಲು ಬಳಸಿಕೊಂಡಿರುವುದು ಖಂಡನೀಯ ಎಂದರು.