Connect with us

ಸ್ಥಳೀಯ

ಕಥೋಲಿಕ್ ಸಭಾ ಬನ್ನೂರು ಘಟಕ ಮತ್ತು ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಸಹಭಾಗಿತ್ವದಲ್ಲಿ ಕೋಡಿಂಬಾಡಿ ಶಾಲೆಯಲ್ಲಿ ವನಮಹೋತ್ಸವ

Published

on

ಪುತ್ತೂರು :ಕಥೋಲಿಕ್ ಸಭಾ ಬನ್ನೂರು ಘಟಕ ಮತ್ತು ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಸಹಭಾಗಿತ್ವದಲ್ಲಿ 07/08/2026 ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿಂಬಾಡಿಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಸಸಿಗಳನ್ನು ನೆಟ್ಟು ಮಕ್ಕಳಿಗೆ ಸಿಹಿ ತಿಂಡಿ ನೀಡುವ ಮೂಲಕ ಶಿಕ್ಷಕರು ಮತ್ತು ಮಕ್ಕಳ ಜೊತೆ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಥೋಲಿಕ್ ಸಭಾ ಬನ್ನೂರ್ ಘಟಕದ ಅಧ್ಯಕ್ಷರಾದ ಶ್ರೀ ಡೆನ್ನಿಸ್ ಮಸ್ಕರೆನ್ಹಸ್, ಲಯನ್ಸ್ ಕ್ಲಬ್ ಪುತ್ತೂರ್ ಕ್ರೌನ್ ನ ಅಧ್ಯಕ್ಷರು ಶ್ರೀಮತಿ ಲೀನಾ ಮಚಾದೊ,ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಭಾರತಿ ಸ್ವರಮನೆ, ಶಾಲೆ ಎಸ್.ಡಿ.ಎಮ್.ಸಿ ಅಧ್ಯಕ್ಷೆ ಶ್ರೀಮತಿ ಸ್ಪೂರ್ತಿ ರೈ,ಕೊಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಉಪಧ್ಯಕ್ಷರಾದ ಶ್ರೀ ಜಯಪ್ರಕಾಶ್ ಬದಿನಾರ್, ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ವಿಲ್ಮಾ ಗೋನ್ಸಲ್ವೇಸ್, ಕಾರ್ಯದರ್ಶಿ ಶ್ರೀಮತಿ ನಿಶಾ ಮಿನೆಜಸ್ ,ಕಥೋಲಿಕ್ ಸಭಾ ಬನ್ನೂರ್ ಘಟಕದ ಮತ್ತು ಲಯನ್ಸ್ ಕ್ಲಬ್ ಪುತ್ತೂರ್ ಕ್ರೌನ್ ನ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಭಾರತಿ ಸ್ವರಮನೆ ಎಲ್ಲರನ್ನು ಸ್ವಾಗತಿಸಿದರು, ಶಿಕ್ಷಕಿ ಶ್ರೀಮತಿ ಪವನಾ ಕೆ ಆರ್ ಕಾರ್ಯಕ್ರಮ ನಿರೂಪಣೆ ಮಾಡಿದ್ದರು…

 
 

Continue Reading
Click to comment

Leave a Reply

Your email address will not be published. Required fields are marked *

Advertisement