Connect with us

ಸ್ಥಳೀಯ

ಉಪ್ಪಿನಂಗಡಿ ಪೊಲೀಸ್ ರವರ ದಿಡೀರ್ ಕಾರ್ಯಾಚರಣೆ….ಕಳೆದು ಹೋದ ಚಿನ್ನ ಪತ್ತೆ….ಆರೋಪಿ ಫುಲ್ ಟೈಟ್…!!!?

Published

on

ಕಡೇಶಿವಾಲಯ ನಿವಾಸಿ ವೀರಮ್ಮ ಎಂಬವರ ಪರ್ಸು ಅದರಲ್ಲಿ ಇದ್ದ ನಾಲ್ಕು ಪವನ್ ಚಿನ್ನ ಹಾಗೂ 35 ಸಾವಿರ ರೂಪಾಯಿ ನಗದು ಉಪ್ಪಿನಂಗಡಿ ಬಸ್ಸು ತಂಗುದಾನದ ಬಳಿಯ ಮೀನಿನ ಮಾರ್ಕೆಟಿನ ಬಳಿ ನಿನ್ನೆ ಮದ್ಯಾಹ್ನ 28/08/2026 ರಂದು ನಾಪತ್ತೆ ಯಾಗಿರುತ್ತದೆ, ಯಾರಿಗಾದರೂ ಸಿಕ್ಕಿದಲ್ಲಿ ಮಹೇಶ್ ಬಸ್ಸಿನ ಚಾಲಕರಾದ ನಾರಾಯಣ ಕಡೇಶಿವಾಲಯ ಇವರನ್ನು ಸಂಪರ್ಕಿಸಿ. ಇವರ ತಾಯಿಯ ಪರ್ಸು ಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಅಕ್ಕರೆ ನ್ಯೂಸ್ ನಲ್ಲಿ ವರದಿ ಮಾಡಲಾಗಿತ್ತು. ಇದೀಗ ನವೀನ್ ಎನ್ನುವನನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಬಂದಿಸಲಾಗಿದ್ದು,ಚಿನ್ನ ಸಿಕ್ಕಿದ ಮಾಹಿತಿ ಲಭ್ಯ ವಾಗಿದೆ, ನಗದಿನ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ತಿಳಿದು ಬಂದಿದೆ,ತನಿಖೆಯ ವೇಳೆ ನವೀನ್ ಫುಲ್ ಟೈಟ್ ಆಗಿದ್ದು ನನಗೆ  ಚಿನ್ನಬಿದ್ದು ಸಿಕ್ಕಿದ್ದು ಎಂದು ಹೇಳಿದ್ದಾನೆ ಎಂದು ತಿಳಿದು ಬಂದಿದೆ.ಪೊಲೀಸ್ ಇಲಾಖೆಯ ಈ ಕಾರ್ಯಾಚರಣೆಯ ಬಗ್ಗೆ ಎಲ್ಲೆಡೇ ಶ್ಲಾಘಣೆ ವ್ಯಕ್ತಪಡಿಸಿದ್ದಾರೆ. ಪುತ್ತೂರು ಬಿಲ್ಲವ ಬ್ರಿಗೇಡ್ ಪದಾಧಿಕಾರಿಗಳು ಕೂಡ ತನಿಖೆಯ ಬಗ್ಗೆ ನಿಗಾವಹಿಸಿದ್ದರು.ಪೊಲೀಸ್ ಇಲಾಖೆಗೆ ಅಭಿನಂದನೆ. ಸಲ್ಲಿಸಿದ್ದಾರೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement