Connect with us

ಇತ್ತೀಚಿನ ಸುದ್ದಿಗಳು

ಮಗನಿಗೆ ಅಪರೂಪದ, ಪುರಾತನ ಹೆಸರನ್ನ ಇಟ್ಟ ನಟ ಡಾಲಿ ಧನಂಜಯ್‌; ಈ ವಿಶೇಷ ಹೆಸರಿನ ಅರ್ಥವೇನು?

Published

on

ಡಾಲಿ ಧನಂಜಯ್‌ ಅವರು ಇಂದು ತಮ್ಮ ಪುಟಾಣಿ ಮಗನ ಮುಖವನ್ನ ಅಭಿಮಾನಿಗಳಿಗೆ ತೋರಿಸಿದ್ದಾರೆ. ಹಾಗೇ ಅವನ ಹೆಸರನ್ನೂ ರಿವೀಲ್‌ ಮಾಡಿದ್ದಾರೆ. ಡಾಲಿ ಧನಂಜಯ್‌ ಮತ್ತು ಧನ್ಯತಾ ದಂಪತಿಗೆ ಇದೇ ವರ್ಷ ಮೇ ತಿಂಗಳಲ್ಲಿ ಮಗ ಹುಟ್ಟಿದ್ದಾನೆ. ಆದರೆ ಇದುವರೆಗೂ ತಮ್ಮ ಮಗನ ಫೋಟೋವನ್ನ ಸೋಷಿಯಲ್‌ ಮೀಡಿಯಾದಲ್ಲಿ ಅವರು ಹಾಕಿರಲಿಲ್ಲ. ಇಂದು ಗೌರಿ-ಗಣೇಶ ಹಬ್ಬದ ದಿನವೇ ಮುದ್ದುಮಗನ ಮುಖವನ್ನ ತೋರಿಸಿದ್ದಾರೆ..

 

ವಿಶೇಷ ಹೆಸರು ಇಟ್ಟ ಡಾಲಿ ಧನಂಜಯ್‌ ದಂಪತಿ

ಇನ್ನು ಡಾಲಿ ಧನಂಜಯ್‌ ಮತ್ತು ಧನ್ಯತಾ ದಂಪತಿ ತಮ್ಮ ಮಗನಿಗೆ ವಿಶೇಷ ಹೆಸರು ಇಟ್ಟಿದ್ದಾರೆ. ಅವರು ಎರೆಯ ಎಂದು ನಾಮಕರಣ ಮಾಡಿದ್ದಾರೆ. ಈ ಹೆಸರು ಅಪರೂಪದ್ದಾಗಿದ್ದು, ಅತ್ಯಂತ ಹಳೇ ಹೆಸರಾಗಿದೆ. ಅಂದಹಾಗೇ, ಡಾಲಿ ಮಗನ ಹೆಸರು ಎರೆಯ. ತಮ್ಮ ಫ್ಯಾಮಿಲಿ ಫೋಟೋ ಹಾಕಿದ ಡಾಲಿ ಧನಂಜಯ್‌ ಅವರು ʼಗೌರಿ ಗಣೇಶ ಹಬ್ಬದ ಶುಭಾಶಯಗಳು.ನಮ್ಮನ್ನ ಪ್ರೀತಿಸುವ ಜೀವಗಳು, ಮಗನನ್ನ ನಮಗೆ ಯಾವಾಗ ತೋರಿಸುತ್ತೀರಿ ಅಂತ ಕೇಳ್ತ ಇದ್ರಿ, ಏನು ಹೆಸರು ಅಂತ ಕೇಳ್ತ ಇದ್ರಿ. ಹಬ್ಬದ ದಿನ, ಇವತ್ತು ಪರಿಚಯಿಸುತ್ತ ಇದೀವಿ.
 
‘ಎರೆಯ’— ಪುರಾತನ ಕನ್ನಡ ಪರಂಪರೆಯ ಗೌರವಪೂರ್ಣ ಪದ. ಇದರ ಅರ್ಥ “ಒಡೆಯ, ಸ್ವಾಮಿ, ಅಧಿಪತಿ” — ಒಂದು ಕಾಲದಲ್ಲಿ ರಾಜರು ಮತ್ತು ಅರಸರನ್ನು ಗೌರವದಿಂದ ಸಂಬೋಧಿಸಲು ಬಳಸುತ್ತಿದ್ದ ಹೆಸರು. ಇತಿಹಾಸದ ಪುಟಗಳಲ್ಲಿ, ಚಾಲುಕ್ಯರ ಮಹಾರಾಜ ಇಮ್ಮಡಿ ಪುಲಕೇಶಿ ಅವರ ಬಾಲ್ಯದ ಹೆಸರಾಗಿಯೂ Ereya ಎಂಬ ಹೆಸರು ಕಾಣಿಸುತ್ತದೆ. ಆ ರಾಜರ, ಪಾರಂಪರಿಕ ಮತ್ತು ಶಕ್ತಿಯುತ ಅರ್ಥವನ್ನು ಹೊತ್ತಿರುವ, ನಮ್ಮ ಬದುಕಿನ ಪುಟ್ಟ ಅಧಿಪತಿ, ನಮ್ಮ ಹೃದಯದ ರಾಜ, ನಮ್ಮ “ಎರೆಯ”. ನಿಮ್ಮ ಪ್ರೀತಿ , ಆಶೀರ್ವಾದ ಸದಾ ಇರಲಿʼ ಎಂದು ಹೇಳಿದ್ದಾರೆ.
ಡಾಲಿ ಧನಂಜಯ್‌ ಅವರ ಮಗನಿಗೆ ಇಡಲಾದ ಎರೆಯ ಪದಕ್ಕೆ ಸ್ವಾಮಿ, ಒಡೆಯ, ಅಧಿಪತಿ ಎಂದು ಹೆಸರು ಇದೆ. ಇದೊಂದು ವಿಶೇಷ ಮತ್ತು ಅತ್ಯಂತ ಪುರಾತನಕಾಲದ ಹೆಸರು. ಸಾಮಾನ್ಯವಾಗಿ ಈಗಿನವರು ಹೊಸಹೊಸ ಹೆಸರನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಯಾರೂ ಇಡದಂಥ ಹೆಸರನ್ನ ನಾವಿಡಬೇಕು ಎಂದು ಆಧುನಿಕವಾದ ಹೆಸರುಗಳನ್ನ ಮಕ್ಕಳಿಗೆ ಇಡ್ತಾರೆ. ಆದರೆ ಡಾಲಿ ಹಳೇಯದಾದ, ಅಪರೂಪದ ಹೆಸರನ್ನ ಇಟ್ಟಿದ್ದಾರೆ. ಡಾಲಿ ಧನಂಜಯ್‌ ಮತ್ತು ಧನ್ಯತಾ ಅವರು 2025ರ ಫೆಬ್ರವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರೂ ಮೊದಲಿನಿಂದಲೂ ಸ್ನೇಹಿತರಾಗಿದ್ದವರು. ಇಬ್ಬರೂ ತಮ್ಮತಮ್ಮ ಫೀಲ್ಡ್‌ನಲ್ಲಿ ಹೆಸರು ಮಾಡಿದವರು. ಧನ್ಯತಾ ಅವರು ಖ್ಯಾತ ಪ್ರಸೂತಿ ವೈದ್ಯೆ. ಇದೇ ವರ್ಷ ಮೇ ತಿಂಗಳಲ್ಲಿ ಈ ದಂಪತಿಗೆ ಮಗ ಹುಟ್ಟಿದ್ದಾನೆ. 4 ತಿಂಗಳ ಬಳಿಕ ದಂಪತಿ ತಮ್ಮ ಮಗುವಿನ ಪರಿಚಯ ಮಾಡಿಸಿದ್ದಾರೆ. ಇನ್ನು ಇವರು ಮಗನಿಗೆ ಇಟ್ಟ ಎರೆಯ ಹೆಸರಿನ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಮ್ಮಡಿ ಪುಲಕೇಶಿಯ ಬಾಲ್ಯದ ಹೆಸರು ಎರೆಯ ಎಂದೇ ಆಗಿತ್ತು. ಅದನ್ನೇ ಅನೇಕರು ಉಲ್ಲೇಖಿಸಿದ್ದಾರೆ. ʼಬೂಟಾಟಿಕೆಗಾಗಿ ಕನ್ನಡವನ್ನು ಬೆಳೆಸುತ್ತಿದ್ದೀವಿ ಅನ್ನೋರ ಮಧ್ಯ ಕನ್ನಡವನ್ನು ಬಳಸಿ, ಕನ್ನಡತನವನ್ನು ಮೆರೆಸುವವ ಈ ಧನಂಜಯ, ಎರೆಯನ ತಂದೆ ಧನಂಜಯʼ ಎಂಬಿತ್ಯಾದಿ ಕಮೆಂಟ್‌ಗಳನ್ನ ಹಾಕಿದ್ದಾರೆ. ಎರೆಯ ಪದಕ್ಕೂ ಕನ್ನಡಿಗರಿಗೂ ಬಿಡಿಸಲಾಗದ ನಂಟು ಎಂದು ಹೇಳಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement