Published
2 hours agoon
By
Akkare News

ಇಲ್ಲಿಯವರೆಗೆ ಐವರ ಮೃತದೇಹಗಳು ಸಿಕ್ಕಂತಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟಟದ ತಪ್ಪಲಿನಲ್ಲಿ 7 ವರ್ಷದ ಬಾಲಕ ಪುನೀತ್ ಮೃತದೇಹ ದೊರಕಿದ್ದು, ಕುಟುಂಬದವರು ಅಂತ್ಯಸಂಸ್ಕಾರ ಮಾಡಿದ್ದರು. ನಂತರ ಸೇಲಂನಲ್ಲಿ ಸುನೀತಾ, ರೂಪವತಿ ಮೃತದೇಹ ದೊರಕಿದೆ. ಇದೀಗ ಮತ್ತಿಬ್ಬರ ಶವಗಳು ದೊರಕಿರುವ ಕಾರಣ ನಾಲ್ಕು ಮೃತದೇಗಳನ್ನು ಒಂದೇ ಕಡೆ ಅಂತ್ಯಕ್ರಿಯೆ ಮಾಡಲು ಕುಟುಂಬದವರು ಸಿದ್ಧತೆ ಮಾಡಿದ್ದಾರೆ.
ಇನ್ನುಳಿದ ಶಂಕರ್, ನಳಿನಿ ಶವಗಳು ಸಿಗಬೇಕಿದೆ. ಅವುಗಳ ಶೋಧ ನಡೆಯುತ್ತಿದೆ. ಆರೋಪಿ ನೀಡಿರುವ ಮಾಹಿತಿಯ ಅನುಸಾರ ಶಿರಾಡಿ ಘಾಟ್ನಲ್ಲಿ ಬಿಸಾಡಲಾಗಿದೆ. ಶವ ಬಿಸಾಡಿರುವ ಜಾಗದಲ್ಲಿ ಪೊಲೀಸರ ಹುಡುಕಾಟ ನಡೆಯುತ್ತಿದೆ.






