Published
1 year agoon
By
Akkare News
ಪುತ್ತೂರು :ಸಾರಿಗೆ ಇಲಾಖೆಯ ಸೂಚನೆಯ ಮೇರೆಗೆ,ಖಾಸಗಿ ಬಸ್ಸುಗಳ ದರಗಳನ್ನು ವಿಪರೀತ ತೆಗೆದುಕೊಳ್ಳುವ ಬಗ್ಗೆ ಮಾಹಿತಿ ಬಂದಿರುದರಿಂದ,ಪುತ್ತೂರು ಪ್ರಾದೇಶಿಕ ಸಾರಿಗೆ ಹಿರಿಯ ಮೋಟರು ವಾಹನ ಅಧಿಕಾರಿ ಅಷ್ಪನ್.ಬಿ. ಸ್.ಹಾಗೂ ಸಿಬ್ಬಂದಿಗಳು ರಾಷ್ಟ್ರೀಯ ಹೆದ್ದಾರಿ ಉಪ್ಪಿನಂಗಡಿಯಲ್ಲಿ ಅ,18 ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಖಾಸಗಿ ಬಸ್ಸುಗಳ ತಪಾಸಣೆಯನ್ನು ಕೈಗೊಂಡಿರುತ್ತಾರೆ.ಈ ಸಂದರ್ಭದಲ್ಲಿ ಖಾಸಗಿ ಬಸ್ಸು ನವರಿಗೆ ನಿಗದಿತ ಶುಲ್ಕಕಿಂತ ಹೆಚ್ಚು ದರ ತೆಗೆದುಕೊಳ್ಳದ ಬಗ್ಗೆ ಖಡಕ್ ಸೂಚನೆಯನ್ನು ನೀಡಿದ್ದಾರೆ. 18 ಪ್ರಕರಣ ದಾಖಲಾಗಿದೆ.