Published
1 year agoon
By
Akkare News
ಬೆಂಗಳೂರು: ರಾಜ್ಯ ಸರ್ಕಾರದಿಂದ ಜಿಲ್ಲಾ ಮಟ್ಟದಲ್ಲಿ 2021-2022 ನೇ ಸಾಲಿನಲ್ಲಿ ಆಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಕೊಡುವ ಪ್ರತಿಭಾ ಪುರಸ್ಕಾರ ಪ್ರಶಸ್ತಿ ದೊರಕಿದೆ. ಇದರಲ್ಲಿ ವಾಯ್ಸ್ ಆಪ್ ಆರಾಧನ ಪ್ರತಿಭೆಗಳ ಚಾವಡಿ ಯಲ್ಲಿ ಸಿಂಚನ . ಎಸ್. ಶಂಕರ್,ಒಂಬತ್ತನೇ ತರಗತಿ ಶ್ರೀ ಕುಮಾರನ್ಸ್ ಚಿಲ್ದ್ರೆನ್ಸ್ ಹೋಂ ಟಾಟಾ ಸಿಲ್ಕ್ ಫಾರಂ ಪ್ರತಿಭಾ ಪುರಸ್ಕಾರ ಪ್ರಶಸ್ತಿ ಲಭಿಸಿದೆ.
1) ಕರ್ನಾಟಕ ಪ್ರತಿಭಾ ರತ್ನ(ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ವತಿಯಿಂದ )
2)ಮೈಸೂರು ರತ್ನ(ಮೈಸೂರಿನಿಂದ)
3)ವರ್ಷದ ಸಾಧಕ ರತ್ನ (2020-2021)
4.ಅಂತರರಾಷ್ಟ್ರೀಯ ಸ್ಪೆಲ್ ಬೀ(ಸ್ಪೆಲ್ ಬೀ )ನಲ್ಲಿ, ಅಂತರರಾಷ್ಟ್ರೀಯ ಮಟ್ಟದಲ್ಲಿ 6 ನೇ ಸ್ಥಾನ ದೊರೆತಿದೆ…2023
5. ಆಕಾಶವಾಣಿ ಬೆಂಗಳೂರಿನಲ್ಲಿ ಮಕ್ಕಳ ದಿನಾಚರಣೆಯಂದು ಸಂದರ್ಶನ ಮಾಡಿದ್ದಾರೆ.ಹಾಗೂ ರೇಡಿಯೋ ಮಣಿಪಾಲದಲ್ಲೂ ಸಂದರ್ಶನ ಮಾಡಿದ್ದಾರೆ.
ಬಂದಿರುವ ಬಿರುದುಗಳು
1) ಬೆಳಕಿನ ಕೋಗಿಲೆ
2) ಚೋಟಾ ಚಾಂಪಿಯನ್ (ನ್ಯಾನೋ ಕಥೆ ಬರೆಯುವ ಸ್ಪರ್ಧೆ)
3) ಜನಮನ ದಸರ ಪುರಸ್ಕಾರ ಪ್ರಶಸ್ತಿ (ಮೈಸೂರು )
4.ಸ್ವರ್ಣ ಕಲಾರತ್ನ
5.ಸಕಲ ಕಲಾಕೋವಿದೆ
(ಕರ್ನಾಟಕ ಕಲಾವಿದರ ರಕ್ಷಣಾ ವೇದಿಕೆಯಿಂದ )
I) ಸಂಗೀತ (ಕರ್ನಾಟಕ ಶಾಸ್ತ್ರೀಯ, ಭಾವಗೀತೆ, ಚಿತ್ರಗೀತೆ…ಕರೋಕಿ ಗಾಯನ ), ರಾಗ ಸಹಿತ ಶ್ಲೋಕಗಳ ಗಾಯನ, ಭಗವದ್ಗೀತೆ ಅಧ್ಯಾಯಗಳ ಪಠಣ, ಈ ಎಲ್ಲಾ ವಿಭಾಗಗಳಲ್ಲಿ ಶಾಲಾ ಮಟ್ಟ, ರಾಜ್ಯ ಮಟ್ಟದಲ್ಲಿ ಬಹುಮಾನಗಳು ಬಂದಿದೆ. ರಿಯಾಲಿಟಿ ಶೋಗಳಾದ ಹಾಡು ಬಾ ಕೋಗಿಲೆ, ಹಾಡು ಸಂತೋಷಕ್ಕೆ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ದೊರಕಿದೆ.
II) ಏಕಪಾತ್ರಭಿನಯ, ಮೂಕಪಾತ್ರಾಭಿನಯ, ಪ್ರಬಂಧ, ಕಥೆ
ಹೇಳುವುದು, ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಬಹುಮಾನಗಳು ಬಂದಿದೆ.
III) ರಾಷ್ಟೀಯ, ಅಂತರ ರಾಷ್ಟೀಯ ‘ಸ್ಪೆಲ್ ಬೀ ‘ (spell bee-English) ಸ್ಪರ್ಧೆಯಲ್ಲಿ ಭಾಗವಹಿಸಿ ಎಕ್ಸಲೆಂನ್ಸ್ ಅವಾರ್ಡ್ (excellence award) ತೆಗೆದುಕೊಂಡಿದ್ದಾಳೆ.
IV) ಸಾಮಾನ್ಯ ಜ್ಞಾನ (general knowledge), ಗಣಿತ (maths), ಇಂಗ್ಲಿಷ್ ಒಲಂಪಿಯಾಡ್ನಲ್ಲಿ (Olympiad) ಶಾಲಾ ಚಿನ್ನದ ಹಾಗೂ ಬೆಳ್ಳಿ ಪದಕ ಬಂದಿದೆ.
V) ಅಬಾಕಸ್ (ABACUS)ನಲ್ಲಿ , ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟೀಯ ಮಟ್ಟದಲ್ಲಿ ಭಾಗವಹಿಸಿ ಶ್ರೀಲಂಕಾದಲ್ಲಿ ಪ್ರಶಸ್ತಿ ಪಡೆದಿದ್ದಾಳೆ
VI) ರೂಬಿಕ್ ಕ್ಯೂಬ್ (Rubic cube) ವೇಗವಾಗಿ ಆಡುವ ಸ್ಪರ್ಧೆಯಲ್ಲಿ ಮತ್ತು ಚೆಸ್ (chess)ಆಟದಲ್ಲೂ ಬಹುಮಾನ ದೊರಕಿದೆ.
VII) ಕವನ , ನ್ಯಾನೋ ಕಥೆ , ಸಾಹಿತ್ಯ ಬರವಣಿಗೆಯಲ್ಲಿ ಬಹುಮಾನ ದೊರಕಿದೆ. ಇವಳು
ಬರೆದಿರುವ ಕವನ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಪುಸ್ತಕ ರೂಪದಲ್ಲಿ ಪ್ರಕಟಣೆ ಆಗಿದೆ.
ಹಲವಾರು ಕಡೆ ಸಂಗೀತ ಕಾರ್ಯಕ್ರಮ ನೀಡಿದ್ದಾಳೆ
I) ಉಡುಪಿಯ ಮಧ್ವಮಂಟಪದಲ್ಲಿ ಸಂಗೀತ ಗಾಯನ.
II) ಮೈಸೂರಿನ ಅರಮನೆಯ ಮುಂದಿರುವ ಕೋಟೆ ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ಸಂಗೀತ ಗಾಯನ.
III) ಸುತ್ತೂರು ಜಾತ್ರೆಯಲ್ಲಿ ಗಾಯನ
IV) ಶಕ್ತಿಪೀಠ ದೇವಸ್ಥಾನದಲ್ಲಿ (ಮಹಾಲಕ್ಷ್ಮಿ ಲೇಔಟ್ ) ಗಾಯನ.
V)ಶಂಕರ ಟಿವಿ ಮತ್ತು ಆಯುಷ್ ಟಿವಿಯಲ್ಲಿ ಹಾಡಿದ್ದಾಳೆ
VI)ನಂಜನಗೂಡಿನ ಶಂಕರ ಮಠದಲ್ಲಿ ಹಾಡಿದ್ದಾಳೆ.
VII)ಹಲವಾರು ಬಾರಿ ಫೇಸ್ ಬುಕ್ನಲ್ಲಿ ಲೈವ್ ಕಾರ್ಯಕ್ರಮ ಕೊಟ್ಟಿದ್ದಾಳೆ. ಇವರ ಇಷ್ಟೆಲ್ಲಾ ಸಾಧನೆ ಯನ್ನು ಅಕ್ಕರೆ ನ್ಯೂಸ್ ಪ್ರತಿಭೆಗಳ ಚಾವಡಿಯಲ್ಲಿ ಅಭಿನಂದನೆ ಸಲ್ಲಿಸುತ್ತದೆ. ಇನ್ನು ಮುಂದೆಯು ಇವರ ಸಾಧನೆ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತದೆ.