Published
1 year agoon
By
Akkare Newsಮಣಿಪಾಲ: ಕೆಎಂಸಿ ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್ ವೊಂದನ್ನು ಕಳ್ಳನೋರ್ವ ಹಾಡುಹಗಲೇ ಕದ್ದು ಪರಾರಿಯಾದ ಘಟನೆ ನಡೆದಿದೆ.
KA20 J2276 ನೋಂದಣಿ ಸಂಖ್ಯೆ ಹೊಂದಿರುವ ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ಕಳವಾಗಿದೆ. ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳ್ಳ ಮೊದಲು ಮೊಬೈಲ್ ನಲ್ಲಿ ಮಾತನಾಡುವಂತೆ ನಟಿಸಿ, ಆ ಬಳಿಕ ಬೈಕ್ ನ ಹ್ಯಾಂಡ್ ಲಾಕ್ ಮುರಿಯುತ್ತಾನೆ. ಆ ನಂತರ ತನ್ನದೇ ಬೈಕ್ ಎಂಬಂತೆ ಚಲಾಯಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಕಳ್ಳ ಬೈಕ್ ಕದಿಯುವ ದೃಶ್ಯ ಮಾಲ್ ವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ