ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ರಾಜ್ಯ ರಾಜಧಾನಿ ನಮ್ಮ ಕಂಬಳ ಬೆಂಗಳೂರು ಕಂಬಲ ಅಂತಿಮ ಫಲಿತಾಂಶ

Published

on

ಬೆಂಗಳೂರು : ಇತಿಹಾಸದಲ್ಲೇ ಮೊದಲ ಬಾರಿ ಕರಾವಳಿಯನ್ನು ಹೊರತುಪಡಿಸಿ ನಡೆದ ಅದ್ಧೂರಿ ಬೆಂಗಳೂರು ಕಂಬಳ ಭಾನುವಾರ ರಾತ್ರಿ 2 ಗಂಟೆ ಸುಮಾರಿಗೆ ಮುಕ್ತಾಯಗೊಂಡಿದೆ. ನವೆಂಬರ್‌ 25ರ ಬೆಳಗ್ಗೆ 11 ಗಂಟೆಗೆ ಆರಂಭವಾದ ಕೋಣಗಳ ಓಟ ನವೆಂಬರ್‌ 26ರ ರಾತ್ರಿ 2 ಗಂಟೆಗೆ ಅಂತ್ಯಗೊಂಡಿದ್ದು, ಫಲಿತಾಂಶ ಪ್ರಕಟಗೊಂಡಿದೆ.

 

159ರ ಜೋಡಿ ಕೋಣಗಳು ಭಾಗವಹಿಸಿದ ಈ ಮಹಾ ಕೂಟದಲ್ಲಿ (ರಾಜ-ಮಹಾರಾಜ ಕಂಬಳ) ಅತ್ಯಂತ ಪ್ರತಿಷ್ಠೆಯ ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಅವರ ಸಿ ಕೋಣಗಳು ಪ್ರಥಮ ಬಹುಮಾನ ಪಡೆದರೆ ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ ಅವರ ಕೋಣಗಳು ದ್ವಿತೀಯ ಬಹುಮಾನ ಪಡೆದಿವೆ. ಶ್ರೀಕಾಂತ್‌ ಭಟ್‌ ಅವರ ಕೋಣಗಳನ್ನು ಬಂಬ್ರಾಣ ಬೈಲು ವಂದಿತ್‌ ಶೆಟ್ಟಿ ಅವರು ಓಡಿಸಿದ್ದಾರೆ. ಈ ಕೋಣಗಳು 9.51 ಸೆಕೆಂಡ್‌ನಲ್ಲಿ ಓಟವನ್ನು ಮುಗಿಸಿವೆ. ಇದು ಕೂಟ ದಾಖಲೆಯಾಗಿದೆ ಮತ್ತು ಈ ಹಿಂದಿನ ದಾಖಲೆಯನ್ನು ಸರಿಗಟ್ಟಿದಂತಾಗಿದೆ. ಈ ಹಿಂದೆ ಬಜಗೋಳಿ ಜೋಗಿಬೆಟ್ಟು ನಿಶಾಂತ್‌ ಶೆಟ್ಟಿ ಅವರು 9.51 ಸೆಕೆಂಡ್‌ನಲ್ಲಿ ಓಟವನ್ನು ಮುಗಿಸಿದ್ದರು.

 

ಅಂತಿಮ ಫಲಿತಾಂಶ

 

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : 159 ಕನೆಹಲಗೆ: 07 ಜೊತೆ ಅಡ್ಡಹಲಗೆ: 06 ಜೊತೆ ಹಗ್ಗ ಹಿರಿಯ: 21 ಜೊತೆ ನೇಗಿಲು ಹಿರಿಯ: 32 ಜೊತೆ ಹಗ್ಗ ಕಿರಿಯ: 31 ಜೊತೆ ನೇಗಿಲು ಕಿರಿಯ: 62 ಜೊತೆ

 

ಕನೆಹಲಗೆ ವಿಭಾಗ

 

ಬೊಳ್ಳಂಬಳ್ಳಿ ಶ್ರೀರಾಮ ಚೈತ್ರ ಪರಮೇಶ್ವರ ಭಟ್ “ಬಿ” (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ) ಹಲಗೆ ಮುಟ್ಟಿದವರು: ಉಲ್ಲೂರು ಕಂದಾವರ ಗಣೇಶ್

 

ಅಡ್ಡ ಹಲಗೆ ವಿಭಾಗ

 

ಪ್ರಥಮ: ಎಸ್.ಎಮ್.ಎಸ್ ಫ್ಯಾಮಿಲಿ ಬೆಂಗಳೂರು ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

 

ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

 

ಹಗ್ಗ ಹಿರಿಯ ವಿಭಾಗ

 

ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ “ಸಿ” ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

 

ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ ಓಡಿಸಿದವರು: ಭಟ್ಕಳ ಶಂಕರ್ ನಾಯ್ಕ

 

ಹಗ್ಗ ಕಿರಿಯ ವಿಭಾಗ

 

ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್

 

ದ್ವಿತೀಯ: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ “ಎ” ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್

 

ನೇಗಿಲು ಹಿರಿಯ ವಿಭಾಗ

 

ಪ್ರಥಮ: ಬಂಗಾಡಿ ಪರಂಬೇಲು ನಾರಾಯಣ ಮಲೆಕುಡಿಯ ಓಡಿಸಿದವರು: ಸರಪಾಡಿ ಧನಂಜಯ ಗೌಡ

 

ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ ಓಡಿಸಿದವರು: ಪಟ್ಟೆ ಗುರು ಚರಣ್

 

ನೇಗಿಲು ಕಿರಿಯ ವಿಭಾಗ

 

ಪ್ರಥಮ: ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ

 

ದ್ವಿತೀಯ: ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಶೆಟ್ಟಿ ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

 

ಗೆದ್ದವರಿಗೆ ಬಹುಮಾನ ಎಷ್ಟು?

 

ಈ ಕೂಟದಲ್ಲಿ ಪ್ರಥಮ ಪ್ರಶಸ್ತಿ ಗೆದ್ದವರಿಗೆ 16 ಪವನ್‌ ಚಿನ್ನ ಮತ್ತು 1 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ. ದ್ವಿತೀಯ ಪ್ರಶಸ್ತಿ ಗೆದ್ದವರಿಗೆ 8 ಪವನ್‌ ಚಿನ್ನ ಮತ್ತು 50 ಸಾವಿರ ರೂ. ಬಹುಮಾನ ನೀಡಲಾಗಿದೆ. ಮೂರನೇ ಬಹುಮಾನವಾಗಿ 4 ಪವನ್‌ ಚಿನ್ನ ಮತ್ತು 25 ಸಾವಿರ ರೂ. ನೀಡಲಾಗುತ್ತದೆ ಎಂದು ಘೋಷಿಸಲಾಗಿತ್ತು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version