Published
1 year agoon
By
Akkare Newsಪುತ್ತೂರು : ಕೃಷಿ ಉತ್ಪನ್ನಗಳ ತಯಾರಿಕಾ ಸಂಸ್ಥೆ ಎಸ್‌ಆರ್‌ಕೆ ಲ್ಯಾಡರ್ ಬೆಳ್ಳಿಹಬ್ಬದ ಪ್ರಯುಕ್ತ ನೂತನ ಲೋಗೋ ಆನಾವರಣ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಕಾರ್ಯಕ್ರಮವು ನ 28 ರಂದು ನಡೆಯಲಿದೆ.
ಬೆಳ್ಳಿಹಬ್ಬದ ವಿವಿಧ ಕಾರ್ಯಕ್ರಮಕ್ಕೆ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಚಾಲನೆ ನೀಡಲಿದ್ದಾರೆ ಇದೆ ಸಂದರ್ಭ ಸಂಸ್ಥೆಯ ನೂತನ ಲೋಗೋ ಆನಾವರಣವನ್ನು ರಾಜಾರಾಮ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಮಾಡಲಿದ್ದಾರೆ
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷರಾದ ಜಯರಾಜ್ ಭಂಡಾರಿ, ಆರ್ಕಷಣ್ ಇಂಡಸ್ಟಿçÃಸ್ ಮಾಲಕ ಸಾದಿಕ್ ಕುಂಬ್ರ, ಶ್ರೀ ಮಹಾಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಪ್ರಕಾಶ್ ಪೈ ಬಿ ವಹಿಸಲಿದ್ದಾರೆ
ಕಾರ್ಯಕ್ರಮದ ನಂತರ ಶ್ರೀ ಮಹಾಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ