ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕರ್ನಾಟಕ

ಬೆಂಗಳೂರು ಕಂಬಳಕ್ಕೆ ಹೇಗೆ ಸಿದ್ಧಗೊಂಡಿದೆ ಅರಮನೆ ಮೈದಾನ

Published

on

ಬೆಂಗಳೂರಿನಲ್ಲಿ ನಡೆಯುವ ಕಂಬಳಕ್ಕೆ 8 ಸಾವಿರ ಜನ ಗ್ಯಾಲರಿಯಲ್ಲಿ ಕುಳಿತು ನೋಡೋ ವ್ಯವಸ್ಥೆ ಮಾಡಲಾಗಿದೆ. ಆದ್ರೆ 10 ಲಕ್ಷ ಜನರು ಬರುವ ನಿರೀಕ್ಷೆ ಇದೆ

ಬೆಂಗಳೂರು: ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಂಬಳ ಸ್ಪರ್ಧೆ ನಡೆಯುತ್ತಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಅರಮನೆ ಮೈದಾನದಲ್ಲಿ ಕಂಬಳ ಅದ್ದೂರಿ ಚಾಲನೆ ನೀಡಲಿದ್ದು. ಇಂತಹ ಐತಿಹಾಸಿಕ ಕ್ಷಣಕ್ಕೆ ರಾಜಧಾನಿಯ ನೆಲ ಸಾಕ್ಷಿಯಾಗಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಮೊಟ್ಟ ಮೊದಲ ಕಂಬಳಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕಂಬಳದ ಸೊಬಗನ್ನು ಸವಿಯಲು ಸಿಲಿಕಾನ್ ಸಿಟಿ ಮಂದಿ ಕಾತರದಿಂದ ಕಾಯುತ್ತಿದ್ದಾರೆ.

ಬೆಂಗಳೂರು ಕಂಬಳದ ವ್ಯವಸ್ಥೆ ಹೇಗಿದೆ ನೋಡೋಣ ಬನ್ನಿ…

ಬೆಂಗಳೂರಿನಲ್ಲಿ ನಡೆಯುವ ಕಂಬಳಕ್ಕೆ 8 ಸಾವಿರ ಜನ ಗ್ಯಾಲರಿಯಲ್ಲಿ ಕುಳಿತು ನೋಡೋ ವ್ಯವಸ್ಥೆ ಮಾಡಲಾಗಿದೆ. ಆದ್ರೆ 10 ಲಕ್ಷ ಜನ್ರು ಬರುವ ನಿರೀಕ್ಷೆ ಇದೆ. ಪೊಲೀಸ್ 11 ಲಕ್ಷ ಜನ ಇರ್ತಾರೆ ಅನ್ನೊ ಮಾಹಿತಿ ಇದೆ. ಪಾರ್ಕಿಂಗ್ ವ್ಯವಸ್ಥೆ ಸಹ ಮಾಡಲಾಗಿದೆ.

KSRTCಯಿಂದ ೧೫೦ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಸ್ವಯಂ ಸೇವಕರ ವ್ಯವಸ್ಥೆ ಮಾಡಲಾಗಿದ್ದು ಟ್ರಾಫಿಕ್ ಮಾನಿಟರಿಂಗ್ ಕೂಡ ಮಾಡಲಾಗುತ್ತೆ. 8 ಸೆಗ್ಮೆಂಟ್‌ನಲ್ಲಿ ಕಂಬಳ ನಡೆಯಲಿದೆ. ನೇಗಿಲು ಹಿರಿಯ, ನೇಗಿಲು ಕಿರಿಯ, ಹಲಗೆ ವಿಭಾಗದಲ್ಲಿ ಕಂಬಳ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version