Published
1 year agoon
By
Akkare Newsಪುತ್ತೂರು: ಕುಂಬ್ರದ ಮಾತೃಶ್ರೀ ಅರ್ಥ್ ಮೂವರ‍್ಸ್ ಸಂಸ್ಥೆಯಲ್ಲಿ ಟಿಪ್ಪರ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ ಬಾಗಲಕೋಟೆ ಬಾದಾಮಿ ಡಾಣಕಶಿರೂರು ಮೂಲದ ಹನುಮಂತ ಮಾದರ (22ವ) ಎಂಬವರನ್ನು ಕುಂಬ್ರದಲ್ಲಿ ಅವರು ವಾಸವಾಗಿದ್ದ ರೂಮ್‌ನಿಂದ ಕಿಡ್ನಾಪ್ ಮಾಡಲಾಗಿತ್ತು .ಈ ಕಿಡ್ನಾಪ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಕಿಡ್ನಾಪ್ ಆಗಿದ್ದ ಹನುಮಂತ ಮಾದರ ಎಂಬವರು ಆಗುಂಬೆ ಘಾಟ್‌ನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಎಸ್.ಐ ರವಿ ಬಿ.ಎಸ್‌ರವರ ನೇತೃತ್ವದ ತಂಡ ಇಬ್ಬರು ಆರೋಪಿಗಳನ್ನು ಈಗಾಗಲೇ ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.
ಬಾಗಲಕೋಟೆಯ ಡಾಣಕಶಿರೂರು ರೇಣವ್ವ ಮಾದರ ಮತ್ತು ಸುರೇಶರವರ ಮಗನಾಗಿರುವ ಹನುಮಂತ ಮಾದರ ಎಂಬವರ ಬಗ್ಗೆ ಶಿವಪ್ಪ ಮಾದರ ಎಂಬವರು ಹನುಮಂತನ ಮಾವ ಮಂಜುನಾಥ ಎಂಬವರಲ್ಲಿ ನಿನ್ನ ಅಕ್ಕನ ಮಗ ಹನುಮಂತ ನನ್ನ ಹೆಂಡತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದು ಅವನನ್ನು ಎಲ್ಲಿಗಾದರೂ ಕಳಿಸು ಎಂದು ಹೇಳಿದ್ದು ಅದರಂತೆ ಹನುಮಂತನು ದಕ್ಷಿಣ ಕನ್ನಡ ಜಿಲ್ಲೆಯ ಕುಂಬ್ರದಲ್ಲಿ ಜೆಸಿಬಿ ಕೆಲಸ ಮಾಡಿಕೊಂಡಿದ್ದ ಗೆಳೆಯ ಸಂತೋಷ್ ಗದ್ದಿಗೌಡ ಎಂಬವರ ಹತ್ತಿರ ಬಂದಿದ್ದರು. ನ.11 ರಂದು ಮಧ್ಯಾಹ್ನ ಶಿವಪ್ಪ ಎಂಬವರು ಮಂಜುನಾಥರಿಗೆ ಕರೆ ಮಾಡಿ ನಿನ್ನ ಅಕ್ಕನ ಮಗ ಸಿಕ್ಕಿದರೆ ಖಂಡಿತ ಬಿಡುವುದಿಲ್ಲ ಎಂದು ಹೇಳಿದ್ದು ಅಲ್ಲದೆ ಅದೇ ದಿನ ಸಂಜೆ 6.30 ಗಂಟೆಗೆ ಕುಂಬ್ರದ ಸಂತೋಷ್ ಎಂಬವರಿಗೆ ಕರೆ ಮಾಡಿ ಶಿವಪ್ಪ, ಮಂಜುನಾಥ, ದುರ್ಗಪ್ಪ ಮಾದರ ಎಂಬವರು ಕೆ.ಎ 26 ಬಿ 3833 ನಂಬ್ರದ ಮಹೇಂದ್ರ ಮ್ಯಾಕ್ಸಿಂ ವಾಹನದಲ್ಲಿ ಕುಂಬ್ರದ ಮಸೀದಿ ಬಳಿ ಇರುವ ರೂಮ್‌ನಿಂದ ಹನುಮಂತ ಮಾದರರವರನ್ನು ಪುತ್ತೂರು ಕಡೆಗೆ ಕರೆದುಕೊಂಡು ಹೋಗಿದ್ದರು ಎಂದು ಸಂತೋಷ್ ತಿಳಿಸಿದ್ದು ಆ ಬಳಿಕ ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ನ.19 ರಂದು ಬಾದಾವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹನುಮಂತ ಮಾದರರ ತಾಯಿ ರೇಣವ್ವ ಮಾದರ ಹಾಗೂ ಹನುಮಂತನ ಮಾವ ಮಂಜುನಾಥರವರು,ಹನುಮಂತ ಮನೆಗೆ ಬಾರದೆ ನಾಪತ್ತೆಯಾಗಿದ್ದು ಈ ಬಗ್ಗೆ ಹನುಮಂತನನ್ನು ಪತ್ತೆ ಮಾಡಿ ಶಿವಪ್ಪ, ದುರ್ಗಪ್ಪ, ಮಂಜುನಾಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರು.