Published
1 year agoon
By
Akkare Newsದೇಶ ದೇಶಗಳನ್ನು ಸುತ್ತುತ್ತ, ಅಚ್ಚಗನ್ನಡದಿಂದಲೇ ಎಲ್ಲವನ್ನೂ ಪರಿಚಯಿಸುತ್ತಾ, ಪ್ರತಿಯೊಬ್ಬರನ್ನೂ ರಂಜಿಸುತ್ತ ‘ನಮಸ್ಕಾರ ದೇವ್ರೂ’ ಎನ್ನುತ್ತ ಕನ್ನಡಿಗರ ಮನ ಗೆದ್ದಿರೋ ಖ್ಯಾತ ಯೂಟ್ಯೂಬರ್ ಗಗನ್ ಶ್ರೀನಿವಾಸ್ ಅಲಿಯಾಸ್ ಡಾ ಬ್ರೋ ಅವರು ನಾಪತ್ತೆಯಾಗಿದ್ದಾರೆ ಎನ್ನುವ ಸುದ್ದಿಯೊಂದು ಭಾರೀ ಸುದ್ದಿಯಾಗುತ್ತಿದೆ.
ಹೌದು, ದೇಶ ಪರ್ಯಟನೆ ಮಾಡುತ್ತಾ ದಿನಕ್ಕೊಂದು, ವಾರಕ್ಕೆರಡು ವಿಡಿಯೋಗಳನ್ನು ಯೂಟ್ಯೂಬ್ ಗಳಿಗೆ ಹರಿಬಿಡುತ್ತಾ ಎಲ್ಲರ ಕುತೂಹಲ ತಣಿಸುತ್ತಿದ್ದ ಡಾ ಬ್ರೋ ಒಂದು ತಿಂಗಳಿಂದ ತಮ್ಮ ಯೂಟ್ಯೂಬ್ ಗೆ ಯಾವುದೇ ವಿಡಿಯೋಗಳನ್ನು ಅಪ್ಲೋಡ್ ಮಾಡಿಲ್ಲ. ಅಲ್ಲದೆ ಇತರ ಯಾವುದೇ ಸೋಷಿಯಲ್ ಮೀಡಿಯಾಗಳಲ್ಲಿ ಅವರ ಸಕ್ರಿಯತೆಯೂ ಕಂಡು ಬಂದಿಲ್ಲ. ಹೀಗಾಗಿ ನಮ್ಮ ಪ್ರೀತಿಯ ಡಾ. ಬ್ರೋಗೆ ಏನಾಯ್ತು ಎಂದು ಅಭಿಮಾನಿಗಳ ವಲಯದಲ್ಲಿ ಆತಂಕ ಶುರುವಾಗಿದೆ.
ಅಲ್ಲದೆ ಕೆಲವು ಖಾಸಗೀ ಮಾಧ್ಯಮಗಳು ಕೂಡ ಇದನ್ನು ಭಿತ್ತರಿಸಿದ್ದು ಡಾ ಬ್ರೋ ತಿಂಗಳಿಂದ ವಿಡಿಯೋ ಅಪ್ಲೋಡ್ ಮಾಡಿಲ್ಲ ಎಂದು ಕಳವಳವ್ಯಕ್ತಪಡಿಸಿವೆ. ಕೆಲವರು ಈ ವಿಡಿಯೋಗಳನ್ನು ಇಟ್ಟುಕೊಂಡು ಚೀನಾದವರು ಏನೋ ಮಾಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಯಾಕೆಂದರೆ ಬ್ರೋ ಅವರು ಕೊನೆಯದಾಗಿ ಚೀನಾದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದರು.