Published
12 months agoon
By
Akkare Newsವಾಹನ ಸವಾರರಿಗೆ ಮುಖ್ಯ ಮಾಹಿತಿ ಇಲ್ಲಿದೆ ನೋಡಿ! ಹೊಸ ವರ್ಷದ ಹೊಸ್ತಿಲಲ್ಲಿ ವಾಹನ ಸವಾರರಿಗೆ ಬಿಗ್ ಶಾಕಿಂಗ್ ಹೊರಬಿದ್ದಿದೆ. ಬೆಳಗಾವಿ ವಿಧಾನ ಮಂಡಲದ ಅಧಿವೇಶನದಲ್ಲಿ ಅಂಗೀಕಾರಗೊಂಡಿದ್ದ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ಮಸೂದೆ 2023 ಕ್ಕೆ ಶನಿವಾರ ರಾಜ್ಯಪಾಲರು ಅನುಮೋದನೆ ನೀಡಿರುವುದರಿಂದ ಜ.1 ರಿಂದ ರಾಜ್ಯದಲ್ಲಿ ಎಲ್ಲಾ ರೀತಿಯ ವಾಹನಗಳ ಮೇಲಿನ ತೆರಿಗೆ ಏರಿಕೆಯಾಗಲಿದೆ.
ಈ ಕಾಯಿದೆಯಡಿಯಲ್ಲಿ ಸರಕು ಸೇವಾ ವಾಹನ, ಶಾಲಾ ಒಡೆತನದ ವಾಹನಗಳು, ಕ್ಯಾಬ್ ಗಳು.ಎಲೆಕ್ಟ್ರಿಕ್ ವಾಹನಗಳ ನೋಂದಣಿ ತೆರಿಗೆ(Tax)ಏರಿಕೆಯಾಗಲಿದೆ. ಸರಕು ಸಾಗಣೆ ವಾಹನಗಳನ್ನು ತೂಕದ ಆಧಾರದ ಮೇಲೆ ಮೂರು ಹೆಚ್ಚುವರಿ ವರ್ಗೀಕರಣ ಮಾಡಲಾಗಿದ್ದು, ಅವುಗಳಿಗೆ ಜೀವಿತಾವಧಿ ಮೋಟಾರ್ ವಾಹನ ತೆರಿಗೆ ವಿಧಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. 1.5 ಟನ್ ನಿಂದ 5.5 ಟನ್ ವರೆಗಿನ ವಾಹನಗಳಿಗೆ ಜೀವಿತಾವಧಿ ತೆರಿಗೆ ವಿಧಿಸಲಾಗುತ್ತಿದ್ದು, ಇನ್ನು ಮುಂದೆ 5.5 ಟನ್ ನಿಂದ 7.5 ಟನ್, 7.5 ಟನ್ ನಿಂದ 9.5 ಟನ್, 9.5 ಟನ್ ನಿಂದ 12 ಟನ್ ವರೆಗಿನ ತೂಕದ ವಾಹನಗಳಿಗೂ ಜೀವಿತಾವಧಿ ತೆರೆಗೆ ಪಾವತಿ ಮಾಡಬೇಕಾಗುತ್ತದೆ.
ಸರಕು ಸಾಗಣೆ ವಾಹನದ ಬಳಕೆ ಮಾಡಿದ ವರ್ಷವನ್ನು ಆಧರಿಸಿ ನಿರ್ದಿಷ್ಟ ಜೀವಿತಾವಧಿ ಶುಲ್ಕ ವಿಧಿಸಲಾಗುತ್ತದೆ. ರಾಜ್ಯದಲ್ಲಿ ನೋಂದಣಿಯಾಗುವ ಮೋಟಾರ್ ಕ್ಯಾಬ್ ಗಳಿಗೂ(ಹೊರರಾಜ್ಯ ನೋಂದಣಿ, ನ್ಯಾಷನಲ್ ಪರ್ಮಿಟ್ ಹೊರತುಪಡಿಸಿ) ಜೀವಿತಾವಧಿ ತೆರಿಗೆ ವಿಧಿಸಲು ವಿಧೇಯಕದಲ್ಲಿ ಅನುವು ಮಾಡಿಕೊಡಲಾಗಿದೆ. ಸದ್ಯ, 15 ಲಕ್ಷ ರೂ. ಮೀರಿದ ವಾಹನಗಳಿಗೆ ಶೇಕಡ 15ರಷ್ಟು ಜೀವಿತಾವಧಿ ತೆರಿಗೆ ವಿಧಿಸಲಾಗುತ್ತಿದೆ. ಈಗ 10 ಲಕ್ಷ ರೂ.ನಿಂದ 15 ಲಕ್ಷ ರೂ. ಮಿತಿಯೊಳಗಿನ ಕ್ಯಾಬ್ ಗಳಿಗೂ ಶೇಕಡ 9 ರಷ್ಟು ಜೀವಿತಾವಧಿ ತೆರಿಗೆ ವಿಧಿಸಲಾಗುತ್ತದೆ. ಈ ನಿಯಮ ಈಗಾಗಲೇ ಬಳಕೆಯಲ್ಲಿರುವ ವಾಹನಗಳಿಗೂ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.ಶಾಲಾ ವಾಹನಗಳಿಗೆ 10ನೇ ತರಗತಿವರೆಗೆ ಪ್ರತಿ ಚದರ ಮೀಟರ್ ಗೆ ವಿಧಿಸುತ್ತಿದ್ದ ತೆರಿಗೆಯನ್ನು 20 ರೂ. ನಿಂದ 100 ರೂಪಾಯಿಗೆ ಏರಿಕೆ ಮಾಡಲಾಗಿದೆ. ಶಾಲಾ ಬಸ್ ವಾರ್ಷಿಕ 2,000 ರೂ. ತೆರಿಗೆ ಪಾವತಿಸುತ್ತಿದ್ದರೆ ಇನ್ನೂ 10,000 ರೂ. ಪಾವತಿ ಮಾಡಬೇಕಾಗುತ್ತದೆ.