Published
7 months agoon
By
Akkare News
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಹಿರಿಯ ಪೊಲೀಸ್ ಅಧಿಕಾರಿಗಳಾದ ಬಿ. ದಯಾನಂದ್ ಮತ್ತು ಶೇಖರ್ ಎಚ್. ತೆಕ್ಕಣ್ಣವರ್ ಅವರ ಅಮಾನತು ಆದೇಶವನ್ನು ಸರ್ಕಾರ ಹಿಂಪಡೆದಿದೆ. ದಯಾನಂದ್ ಅವರನ್ನು ಎಡಿಜಿಪಿ (ಕಾರಾಗೃಹ) ಹುದ್ದೆಗೆ ಮತ್ತು ತೆಕ್ಕಣ್ಣವರ್ ಅವರನ್ನು ಗುಪ್ತಚರ ಇಲಾಖೆಯ ಎಸ್‌ಪಿ ಹುದ್ದೆಗೆ ನಿಯೋಜಿಸಲಾಗಿದೆ. ಐಜಿಪಿ ವಿಕಾಸ್‌ಕುಮಾರ್ ಅವರ ಅಮಾನತು ಮುಂದುವರೆದಿದೆ.
ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿಗಳಾದ ಬಿ ದಯಾನಂದ್, ಶೇಖರ್ ಎಚ್. ತೆಕ್ಕಣ್ಣವರ್ ಅವರ ಅಮಾನತು ವಾಪಸ್ ತೆಗೆದುಕೊಂಡಿದ್ದ ಸರ್ಕಾರವು ಇಬ್ಬರಿಗೂ ಸ್ಥಳ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ದುರಂತ ಸಂಬಂಧ ನಗರ ಪೊಲೀಸ್ ಕಮಿಷನರ್ ಆಗಿದ್ದ ಬಿ.ದಯಾನಂದ ಸೇರಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳ ಅಮಾನತನ್ನು ಹಿಂಪಡೆದು ಆದೇಶ ಹೊರಡಿಸಿತ್ತು. ಐಜಿಪಿ ವಿಕಾಸ್‌ಕುಮಾರ್ ಅಮಾನತು ಮುಂದುವರಿಸಿದೆ. ಸದ್ಯ ದಯಾನಂದ್ ಅವರಿಗೆ ಎಡಿಜಿಪಿ ಹುದ್ದೆಗೆ (ಕಾರಾಗೃಹ) ನಿಯೋಜನೆ ಮಾಡಿದೆ. ಇನ್ನು ಶೇಖರ್ ಎಚ್. ತೆಕ್ಕಣ್ಣವರ್ ಅವರಿಗೆ ಗುಪ್ತಚರ ಇಲಾಖೆ ಎಸ್‌ಪಿ ಹುದ್ದೆ ನೀಡಲಾಗಿದೆ.