Published
4 months agoon
By
Akkare News
ರಾಜ್ಯದಲ್ಲಿ ಪಡಿತರ ಚೀಟಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಬರೀ ಪಡಿತರ ಪಡೆಯಲು ಅಷ್ಟೇ ಅಲ್ಲದೆ, ಹಲವಾರು ಸರ್ಕಾರಿ ಸಲಭ್ಯಗಳಿಗೆ ಅರ್ಜಿ ಸಲ್ಲಿಕೆ ಬೇಕೇ ಬೇಕಾಗುತ್ತದೆ. ಒಂದು ವೇಳೆ ಇದರಲ್ಲಿ ತಪ್ಪುಗಳಿದ್ದರೆ, ಕೆಲವೊಮ್ಮೆ ಯಾವುದೇ ಅರ್ಜಿ ಸಲ್ಲಿಸುವ ವೇಳೆ ಪರಿಗಣೆಗೆ ತೆಗೆದುಕೊಳ್ಳಲಾಗುವುದಿಲ್ಲ. ಅಂತಹ ಪಡಿತರ ಚೀಟಿದಾರರಿಗೆ ಇದೀಗ ಗುಡ್ ನ್ಯೂಸ್‌ವೊಂದಿದೆ.
ರಾಜ್ಯದಲ್ಲಿ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಪಡಿತರ ಚೀಟಿ ತಿದ್ದುಪಡಿ ಪ್ರಕ್ರಿಯೆಯನ್ನು ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹಾಗಾದ್ರೆ, ಏನೆಲ್ಲಾ ತಿದ್ದುಪಡಿ ಮಾಡಿಸಬಹುದು ಹಾಗೂ ಬೇಕಾಗುವ ದಾಖಲೆಗಳೇನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಅರ್ಹರು ಬಿಪಿಎಲ್ ಕಾರ್ಡ್‌ಗಳನ್ನು ಹೊಂದುವ ಮೂಲಕ ಬಡವರಿಗೆ ಸಿಗಬೇಕಾದ ಪಡಿತರವನ್ನು ಕಿತ್ತುಕೊಳ್ಳುತ್ತಿದ್ದು, ಇಂತವರಿಗೆ ಕಡಿವಾಣ ಹಾಕುವ ಕೆಲಸ ಮುಂದುವರೆದಿದೆ. ಈ ನಡುವೆಯೇ ಪಡಿತ ತಿದ್ದುಪಡಿ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಕೆಳದ ಕೆಲ ದಿನಗಳ ಹಿಂದೆಯಷ್ಟೇ ಈ ಪ್ರಕ್ರಿಯೆ ನಿಲ್ಲಿಸಲಾಗಿತ್ತು. ಆದರೆ, ಇದೀಗ ಮತ್ತೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಫಲಾನುಭವಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ತಿದ್ದುಪಡಿಗೆ ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು? * ಬೆಂಗಳೂರು ಒನ್ * ಗ್ರಾಮ ಒನ್ * ಸೈಬರ್ ಸೆಂಟರ್ ಈಗಾಗಲೇ ಪಡಿತರ ಚೀಟಿ ಹೊಂದಿದವರು ಹೊಸದಾಗಿ ಮಕ್ಕಳು ಅಥವಾ ತಮ್ಮ ಕುಟುಂಬದ ಇತರ ಸದಸ್ಯರ ಸೇರ್ಪಡೆಗೆ ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ http://ahara.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ ಎಂದು ಹೇಳಲಾಗಿದೆ. ಹಾಗಾದ್ರೆ ತಿದ್ದುಪಡಿಗೆ ಯಾವೆಲ್ಲಾ ದಾಖಲೆಗಳು ಬೇಕು ಎಂಬ ಬಗ್ಗೆ ಇಂಚಿಂಚು ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಏನೆಲ್ಲಾ ತಿದ್ದುಪಡಿಗೆ ಅವಕಾಶ?
* ಹೆಸರು ತಿದ್ದುಪಡಿ * ಹೆಸರು ಸೇರ್ಪಡೆ
* ಹೆಸರು ತೆಗೆದುಹಾಕುವಿಕೆ
* ವಿಳಾಸ ಬದಲಾವಣೆ
* ಫೋಟೋ ಬದಲಾವಣೆ
* ಕುಟುಂಬ ಮುಖ್ಯಸ್ಥರ ಬದಲಾವಣೆ
* ನ್ಯಾಯಬೆಲೆ ಅಂಗಡಿ ಬದಲಾವಣೆ
* ಫೋಟೋ ಬದಲಾವಣೆ ಅರ್ಜಿ ಸಲ್ಲಿಕೆಗೆ ಬೇಕಾಗುವ ಅಗತ್ಯ ದಾಖಲೆಗಳು
* ಎಲ್ಲಾ ಸದಸ್ಯರ ಆಧಾರ ಕಾರ್ಡ್
* ಸದಸ್ಯರ ಜಾತಿ ಮತ್ತು ಆದಾಯ 6 ವರ್ಷ ಮೆಲ್ಪಟ್ಟವರಿಗೆ
* ಜನನ ಪ್ರಮಾಣ ಪತ್ರ 6 ವರ್ಷದ ಒಳಗಿನ ಮಕ್ಕಳಿದ್ದರೆ ಪತ್ನಿ ಹೆಸರು ಸೇರ್ಪಡೆಗೆ ಬೇಕಾಗುವ ದಾಖಲೆಗಳು
* ಆಧಾರ್ ಕಾರ್ಡ್ * ಮದುವೆ ಪ್ರಮಾಣ ಪತ್ರ
* ಪೋಷಕರ ಪಡಿತರ ಚೀಟಿ
ಮಗುವಿನ ಹೆಸರು ಸೇರ್ಪಡೆಗೆ ಬೇಕಾದ ದಾಖಲೆಗಳು
* ಮಗುವಿನ ಜನನ ಪ್ರಮಾಣಪತ್ರ *
ಪೋಷಕರ ಆಧಾರ್ ಕಾರ್ಡ್
ಅರ್ಜಿ ಸಲ್ಲಿಸುವ ವಿಧಾನಗಳು
* ಅಧಿಕೃತ ವೆಬ್ ಸೈಟ್ https://ahara.kar.nic.in/homeಗೆ ಭೇಟಿ ನೀಡಿ
* ಮುಖ್ಯ ಪುಟದಲ್ಲಿ ಇ-ಸೇವೆಗಳ ಮೇಲೆ ಕ್ಲಿಕ್ ಮಾಡಿ
* ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆಯನ್ನು ಕ್ಲಿಕ್ ಮಾಡಿ
* ಹೊಸ ಪೇಜ್‌ನಲ್ಲಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನ ಭರ್ತಿ ಮಾಡಿ
* ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಿ ಫಾರ್ಮ್ ಸಲ್ಲಿಸಿ (ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ)
* ಅರ್ಜಿ ಸಲ್ಲಿಕೆ ವೇಳೆ ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೆ, ನಿಮ್ಮ ಮನಗೆ ಅಪ್ಡೇಟ್ ಆಗಿರುವ ಹೊಸ ಪಡಿತರ ಚೀಟಿ ಬರಲಿದೆ.