Connect with us

ಅಭಿವೃದ್ಧಿ ಕಾರ್ಯಗಳು

ಹೊಸ ವರ್ಷದ ಹೊಸ್ತಿಲಲ್ಲಿ ಸಾಮಾನ್ಯ ಜನತೆಗೆ ಭರ್ಜರಿ ಗುಡ್ ನ್ಯೂಸ್, ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ

Published

on

ಹೊಸ ವರ್ಷದ ಹೊಸ್ತಿಲಲ್ಲಿ ಸಾಮಾನ್ಯ ಜನತೆಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಈ ಮೂಲಕ ದೈನಂದಿನ ಪ್ರತಿ ವಸ್ತುಗಳ ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿರುವ ಜನತೆಗೆ ಕೊಂಚ ಮಟ್ಟಿಗೆ ರಿಲೀಫ್ ಸಿಕ್ಕಂತಾಗಿದೆ.

ತೈಲ ಮಾರುಕಟ್ಟೆ ಕಂಪನಿಗಳು ಜನವರಿ 1ರ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು(LPG Cylinder Price today)ಬಿಡುಗಡೆ ಮಾಡಿದ್ದು, 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್(LPG Cylinder)ಬೆಲೆ ಇಳಿಕೆ ಕಂಡಿದೆ. 19 ಕೆಜಿ ತೂಕದ ಸಿಲಿಂಡರ್ ದರ ದೆಹಲಿಯಲ್ಲಿ 1755.50 ರೂಪಾಯಿಯಾಗಿದ್ದು,1.50 ರೂ.ಗಳಷ್ಟುದರ ಇಳಿಕೆ ಕಂಡಿದೆ.ಅದೇ ರೀತಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1,839 ರೂಪಾಯಿಯಾಗಿದ್ದು, ,4 ರೂಪಾಯಿ ಇಳಿಕೆ ಕಂಡಿದೆ. ಅದೇ ರೀತಿ, 14 ಕೆಜಿ ಸಿಲಿಂಡರ್ ಬೆಲೆ 905.50 ರೂಪಾಯಿಯಾಗಿದೆ.


ಕೋಲ್ಕತ್ತಾದಲ್ಲಿ LPG ಸಿಲಿಂಡರ್ ದರ 1868.50 ರೂ. ಆಗಿದ್ದು, ಮುಂಬೈನಲ್ಲಿ 1,710 ರೂಪಾಯಿಯಾಗಿದ್ದರೆ, ಚೆನ್ನೈನಲ್ಲಿ 1929 ರೂಪಾಯಿಯಾಗಿದೆ. ಇದನ್ನು ಹೊರತುಪಡಿಸಿ ಗೃಹ ಬಳಕೆಯ 14 ಕೆಜಿ ಸಿಲಿಂಡರ್ ಬೆಲೆ ಆಗಸ್ಟ್ ದರವೇ ಮುಂದುವರಿದಿದ್ದು, ಸದ್ಯ, 14 ಕೆಜಿ ಸಿಲಿಂಡರ್ 903 ರೂಪಾಯಿಗೆ ಸಿಗಲಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement