Published
12 months agoon
By
Akkare Newsಉಪ್ಪಿನಂಗಡಿ: ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಕೋಡ್ಲೆ ಪರಿಸರದಲ್ಲಿ ಮಹಿಳೆಯೊಬ್ಬರಿಗೆ ಸೇರಿದ ಸಾರ್ವಜನಿಕ ಮಾಮೂಲು ಕಾಲು ದಾರಿಯಲ್ಲಿ ನಡೆದಾಡಲು ಅಡ್ಡಿ ಪಡಿಸುತ್ತಿದ್ದು ಇದೀಗ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಸಂಚಾರಕ್ಕೂ ಅಡಚಣೆಯಾಗಿದೆ. ಇದರಿಂದ ಪರ್ಯಾಯ ವ್ಯವಸ್ಥೆಯಿಲ್ಲದೆ ಪರದಾಡುವಂತಾಗಿದೆ ಎಂದು ವಿದ್ಯಾರ್ಥಿಯೊಬ್ಬರ ಪೋಷಕರಾದ ವಾಸಪ್ಪ ನಾಯ್ಕ ಎಂಬವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇತ್ತೀಚಿಗೆ ಜಾಗ ಖರೀದಿಸಿದ ಮಹಾಬಲ ಭಟ್ ಎಂಬವರ ಪತ್ನಿ ಗಂಗಾವತಿ ಭಟ್ ಎಂಬವರು ಮಾಮೂಲು ಕಾಲು ದಾರಿಯಲ್ಲಿ ಸಂಚರಿಸುವ ಶಾಲಾ ಮಕ್ಕಳನ್ನು ತಡೆದು ದಾರಿಯುದ್ಧಕ್ಕೂ ತ್ಯಾಜ್ಯ ಹೆಕ್ಕಿಸಿ ಬಳಿಕ ತೆರಳುವಂತೆ ತಾಕೀತು ಮಾಡುತ್ತಿದ್ದ ಹಿನ್ನೆಲೆಯಲ್ಲಿ ತನ್ನ 7ನೇ ತರಗತಿಯ ಮಗನ ಸಹಿತವಾಗಿ ಹಲವು ವಿದ್ಯಾರ್ಥಿಗಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಗಂಗಾವತಿ ಭಟ್ ರಲ್ಲಿ ಕೇಳಲು ಹೋದ ನನಗೂ ಅವಾಚ್ಯ ನಿಂದನೆಯೊಂದಿಗೆ ಆ ಜಾಗದ ಮೂಲಕ ಸಂಚರಿಸಬೇಕಾದರೆ ಅವರು ಹೇಳಿದಂತೆ ಮಕ್ಕಳು ತ್ಯಾಜ್ಯ ತೆಗೆದೇ ಹೋಗಬೇಕೆಂದು ನನ್ನಲ್ಲಿಯೂ ತಾಕೀತು ಮಾಡಿರುತ್ತಾರೆ ಮತ್ತು ತ್ಯಾಜ್ಯ ಹೆಕ್ಕಿಸುವುದರ ಮೂಲಕ ಮಾನಸಿಕ ಹಿಂಸೆ ನೀಡಿ, ತನ್ನ ಮಗ ಶಾಲೆಗೆ ಹೋಗಲು ಹಿಂದೇಟು ಹಾಕಲು ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಈ ವಿಷಯವನ್ನು ಕೆಲವು ವಿದ್ಯಾರ್ಥಿಗಳು ಶಾಲಾ ಮುಖ್ಯ್ಯೋಪಾಧ್ಯಾಯರಲ್ಲಿ ತಿಳಿಸಿರುವುದಲ್ಲದೆ, ಶಾಲಾಭಿವೃದ್ಧಿ ಸಮಿತಿಯಿಂದ ಬಂದ ದೂರಿನಂತೆ, ಶಿಕ್ಷಣ ಇಲಾಖೆಯ ಪ್ರತಿನಿಧಿಗಳು ಕೂಡಾ ಸ್ಥಳಕ್ಕೆ ಭೇಟಿ ನೀಡಿರುತ್ತಾರೆ ಮತ್ತು ಈ ಪ್ರಕರರಣವನ್ನು ಗಂಭೀರವಾಗಿ ಪರಿಗಣಿಸಿ ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕನಾಗಿರುವ ನನಗೆ ನ್ಯಾಯ ಒದಗಿಸಬೇಕೆಂದು ದೂರಿನಲ್ಲಿ ಕೇಳಿಕೊಂಡಿದ್ದಾರೆ.