Connect with us

ಅಭಿನಂದನೆ

ಶಾಸಕರ ಸೂಚನೆಯ ಮೇರೆಗೆ ರಸ್ತೆ ದುರಸ್ತಿ , ಬೆಟ್ಟಂಪಾಡಿ ರಸ್ತೆ ಮಾರ್ಗ ಸಂಚಾರದಲ್ಲಿ ಬದಲಾವಣೆ..

Published

on

ಪುತ್ತೂರು: ತಾಲೂಕಿನ ಹಂಟ್ಯಾರು-ಬೆಟ್ಟಂಪಾಡಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಒಂದು ಕಿ.ಮೀ. ಅಪಘಾತ ವಲಯವಾದ ಬಳಕ್ಕ ಎಂಬಲ್ಲಿ ರಸ್ತೆ ಅಗಲೀಕರಣಕ್ಕಾಗಿ ತುರ್ತು ಕಾಮಗಾರಿ ನಡೆಯಲಿರುವುದರಿಂದ ಫೆ.3 ರಿಂದ 12 ರ ತನಕ ಘನ ವಾಹನ ಸಂಚಾರ ಸ್ಥಗಿತಗೊಳಿಸಲಾಗುವುದು.





ಸಾರ್ವಜನಿಕ ಹಿತದೃಷ್ಟಿಯಿಂದ ಈ ಅಗತ್ಯ ಕಾಮಗಾರಿ ನಡೆಯಲಿದ್ದು, ಲಘು ವಾಹನ ಹೊರತುಪಡಿಸಿ ಘನ ವಾಹನ ಸಂಚಾರ ಸ್ಥಗಿತಗೊಳಿಸಲಾಗುವುದು. ಘನ ವಾಹನಗಳು ಈ ಕೆಳಗೆ ತಿಳಿಸಿದ ಬದಲಿ ರಸ್ತೆಯ ಮೂಲಕ ಸಂಚರಿಸಬಹುದು ಎಂದು ಲೋಕೋಪಯೋಗಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಕೆ.ಎಸ್.ಆರ್.ಟಿ.ಸಿ., ಖಾಸಗಿ ಬಸ್ ಪುತ್ತೂರು-ದೇವಸ್ಯ-ಚೆಲ್ಯಡ್ಕ ರಸ್ತೆ ಮೂಲಕ ಸಂಚರಿಸುವುದು, ಇತರ ಸರಕು ಸಾಗಾಣಿಕಾ ಘನ ವಾಹನಗಳು ಕೌಡಿಚ್ಚಾರ್-ರೆಂಜ ರಸ್ತೆ ಮೂಲಕ ಸಂಚರಿಸುವುದು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version