ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಚಿಣ್ಣರ ಲೋಕ ಜೀವನಶೈಲಿ ತಂತ್ರಜ್ಞಾನ ಮಂಗಳೂರು ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ವಿಶೇಷ ವರದಿ ಶಾಲಾ ಚಟುವಟಿಕೆ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಕೇವಲ ಪಠ್ಯಪುಸ್ತಕದಿಂದ ಕಲಿಕೆಯು ಪೂರ್ಣವಾಗುವುದಿಲ್ಲ : ಸುಧೀರ್ ಸಾಗರ್Published
10 months agoon
By
Akkare Newsಕಲ್ಲಡ್ಕ,ಮಾ 7: ಕೇವಲ ಪಠ್ಯಪುಸ್ತಕದಿಂದ ಕಲಿಕೆಯು ಪೂರ್ಣವಾಗುವುದಿಲ್ಲ ಜೊತೆಗೆ ಆಟ ದೈಹಿಕ ವ್ಯಾಯಾಮ ಮುಂತಾದ ಚಟುವಟಿಕೆಗಳು ಕಲಿಕೆಯನ್ನು ಹೆಚ್ಚು ಆಸಕ್ತಿದಾಯಕವಾಗಿ ಮೂಡಿಸಲು ಕಾರಣವಾಗಿವೆ.
ಈ ರೀತಿಯಾಗಿ ಎಳವೆಯಲ್ಲಿ ದೈಹಿಕ ಮಾನಸಿಕ ಹಾಗೂ ಬೌದ್ಧಿಕ ವಿಚಾರಗಳಲ್ಲಿ ತೊಡಗಿಸಿ ಕೊಂಡಾಗ ಮಾತ್ರ ಉತ್ತಮವಾದ ಕಲಿಕೆಯನ್ನು ಹೊಂದಲು ಸಾಧ್ಯ ಎಂಬುದಾಗಿ ಟಾಟಾ ಕಂಪನಿಯ ಆಡಳಿತ ವಿಭಾಗದ ಉಪಾಧ್ಯಕ್ಷರಾದ ಸುಧೀರ್ ಸಾಗರ್ ಹೇಳಿದರು. ಅವರು ಬಂಟ್ವಾಳ
ತಾಲೂಕಿನ ವೀರಕಂಬ ಗ್ರಾಮದ ಮಜಿ ಸರಕಾರಿ ಪ್ರಾಥಮಿಕ ಶಾಲೆಗೆ ತಮ್ಮ ವತಿಯಿಂದ ಬಾಲವನವನ್ನು ನೀಡಿ ಉದ್ಘಾಟಿಸಿದ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ದತ್ತು ಸಂಸ್ಥೆಯ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ರವರ ಸಹೋದರ ಶ್ರೀದೇವಿ ಕನ್ಸ್ಟ್ರಕ್ಷನ್ ಮಾಲಕರಾದ ಸಂದೀಪ್ ಕುಮಾರ್ ಶೆಟ್ಟಿ ಅರೆಬೆಟ್ಟು, ಕರ್ಕೆರ ಎಸ್ ಎಸ್ ಇಂಡಸ್ಟ್ರೀಸ್ ಬಂಟ್ವಾಳ ಇದರ ಪ್ರೇಮನಾಥ ಕೆ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೊರಗಪ್ಪ ನಾಯ್ಕ , ಶಾಲಾ ಶಿಕ್ಷಕ ವೃಂದ ಹಾಗೂ ಮಕ್ಕಳು ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟ ಆಗ್ನೆಸ್ ಮಂಡೋನ್ಸಾ ಸ್ವಾಗತಿಸಿ. ಸಹ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.