ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಕೇವಲ ಪಠ್ಯಪುಸ್ತಕದಿಂದ ಕಲಿಕೆಯು ಪೂರ್ಣವಾಗುವುದಿಲ್ಲ : ಸುಧೀರ್ ಸಾಗರ್

Published

on

ಕಲ್ಲಡ್ಕ,ಮಾ 7: ಕೇವಲ ಪಠ್ಯಪುಸ್ತಕದಿಂದ ಕಲಿಕೆಯು ಪೂರ್ಣವಾಗುವುದಿಲ್ಲ ಜೊತೆಗೆ ಆಟ ದೈಹಿಕ ವ್ಯಾಯಾಮ ಮುಂತಾದ ಚಟುವಟಿಕೆಗಳು ಕಲಿಕೆಯನ್ನು ಹೆಚ್ಚು ಆಸಕ್ತಿದಾಯಕವಾಗಿ ಮೂಡಿಸಲು ಕಾರಣವಾಗಿವೆ.

ಈ ರೀತಿಯಾಗಿ ಎಳವೆಯಲ್ಲಿ ದೈಹಿಕ ಮಾನಸಿಕ ಹಾಗೂ ಬೌದ್ಧಿಕ ವಿಚಾರಗಳಲ್ಲಿ ತೊಡಗಿಸಿ ಕೊಂಡಾಗ ಮಾತ್ರ ಉತ್ತಮವಾದ ಕಲಿಕೆಯನ್ನು ಹೊಂದಲು ಸಾಧ್ಯ ಎಂಬುದಾಗಿ ಟಾಟಾ ಕಂಪನಿಯ ಆಡಳಿತ ವಿಭಾಗದ ಉಪಾಧ್ಯಕ್ಷರಾದ ಸುಧೀರ್ ಸಾಗರ್ ಹೇಳಿದರು. ಅವರು ಬಂಟ್ವಾಳ




ತಾಲೂಕಿನ ವೀರಕಂಬ ಗ್ರಾಮದ ಮಜಿ ಸರಕಾರಿ ಪ್ರಾಥಮಿಕ ಶಾಲೆಗೆ ತಮ್ಮ ವತಿಯಿಂದ ಬಾಲವನವನ್ನು ನೀಡಿ ಉದ್ಘಾಟಿಸಿದ ಮಾತನಾಡಿದರು.






ಕಾರ್ಯಕ್ರಮದಲ್ಲಿ ಶಾಲಾ ದತ್ತು ಸಂಸ್ಥೆಯ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ರವರ ಸಹೋದರ ಶ್ರೀದೇವಿ ಕನ್ಸ್ಟ್ರಕ್ಷನ್ ಮಾಲಕರಾದ ಸಂದೀಪ್ ಕುಮಾರ್ ಶೆಟ್ಟಿ ಅರೆಬೆಟ್ಟು, ಕರ್ಕೆರ ಎಸ್ ಎಸ್ ಇಂಡಸ್ಟ್ರೀಸ್ ಬಂಟ್ವಾಳ ಇದರ ಪ್ರೇಮನಾಥ ಕೆ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೊರಗಪ್ಪ ನಾಯ್ಕ , ಶಾಲಾ ಶಿಕ್ಷಕ ವೃಂದ ಹಾಗೂ ಮಕ್ಕಳು ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟ ಆಗ್ನೆಸ್ ಮಂಡೋನ್ಸಾ ಸ್ವಾಗತಿಸಿ. ಸಹ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version