ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿಪ್ರಾಯ

ಸುಳ್ಯ : ಸರಕಾರದ ಗ್ಯಾರಂಟಿ ಸಮಾವೇಶದಲ್ಲಿ ಪರಾಜಿತ ಅಭ್ಯರ್ಥಿ ಕೃಷ್ಣಪ್ಪ ನವರಿಂದ ಕಿರಿಕ್ , ಉಸ್ತುವಾರಿ ಸಚಿವರ ಮುಂದೆ ನಡೆದ ಘಟನೆ , ಮೂಕ ಪ್ರೇಕ್ಷಕರಾದ ಸಮಾವೇಶಕ್ಕೆ ಸೇರಿದ ಜನಸ್ತೋಮ

Published

on

ಸುಳ್ಯ : ಕಾರ್ಯಕ್ರಮದ ಕುರಿತು ತನಗೆ ಮಾಹಿತಿ ನೀಡಿಲ್ಲವೆಂದು ವಿಧಾನಸಭಾ ಪರಾಜಿತ ಅಭ್ಯರ್ಥಿ ಕೃಷ್ಣಪ್ಪ ಅವರು ಸಮಾವೇಶದ ಆರಂಭದಲ್ಲಿಯೇ ಕಿರಿಕ್ ಮಾಡಿದ ಪ್ರಸಂಗ ನಡೆಯಿತು.ಸಮಾವೇಶ ಆರಂಭಗೊಂಡು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ ಸ್ವಾಗತ ಭಾಷಣ ಮಾಡುವ ಸಂದರ್ಭ ಎದುರು ಸಭಾಂಗಣದಲ್ಲಿ ಆಸೀನರಾಗಿದ್ದ ಕೃಷ್ಣಪ್ಪರವರು ಅಲ್ಲಿಂದಲೇ ಗಟ್ಟಿ ಧ್ವನಿಯಲ್ಲಿ ತನ್ನ ಅಸಹನೆ ವ್ಯಕ್ತಪಡಿಸುತ್ತಿದ್ದುದು ಕಂಡುಬಂತು.

ಸ್ವಲ್ಪ ಹೊತ್ತಿನಲ್ಲಿ ಸೀದಾ ವೇದಿಕೆಗೆ ಹೋಗಿ ವಿಧಾನಪರಿಷತ್‌ ಸದಸ್ಯ ಮಂಜುನಾಥ್ ಭಂಡಾರಿಯವರಲ್ಲಿ ಮತ್ತು ಸಚಿವ ದಿನೇಶ್ ಗುಂಡೂರಾವ್ ರವರಲ್ಲಿ ತಾನು ಡಿಫೀಟೆಡ್ ಕ್ಯಾಂಡಿಡೇಟ್ ಅಲ್ವಾ? ನನಗೆ ಕಾರ್ಯಕ್ರಮದ ಬಗ್ಗೆ ಯಾಕೆ ಯಾವ ಮಾಹಿತಿಯನ್ನೂ ನೀಡಿಲ್ಲ ಎಂದು ಪ್ರಶ್ನಿಸತೊಡಗಿದರು. ಕಾರ್ಯಕ್ರಮ ಒಂದು ಕ್ಷಣ ಸ್ತಬ್ಧವಾಯಿತು. ಒಂದೆರಡು ನಿಮಿಷ ಈ ಹೈಡ್ರಾಮ ಮುಂದುವರಿಯಿತು.






ಮಂಜುನಾಥ ಭಂಡಾರಿಯವರು ಅವರನ್ನು ಸಮಾಧಾನಪಡಿಸಿದರು. ಇತರ ಕೆಲವು ನಾಯಕರು ಕೂಡಾ ವೇದಿಕೆಗೆ ತೆರಳಿ ಪಕ್ಕದ ಕೊಠಡಿಗೆ ಅವರನ್ನು ಕರೆದೊಯ್ದರು. ಬಳಿಕ ಕಾರ್ಯಕ್ರಮ ಮುಂದುವರಿಯಿತು. ಸ್ವಲ್ಪ ಹೊತ್ತಿನಲ್ಲಿ ಕೃಷ್ಣಪ್ಪರವರು ಸಮಾವೇಶದ ಎದುರು ಬಂದು ಕುಳಿತರು

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version