ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಮೇ 3: ಯುನಿವೆಫ್‌ನಿಂದ ಹಜ್ ತರಬೇತಿ ಶಿಬಿರ

Published

on

ಮಂಗಳೂರು, ಎ.30: ಯುನಿವೆಫ್ ಕರ್ನಾಟಕ ಇದರ ದ.ಕ. ಘಟಕದ ವತಿಯಿಂದ ಹಜ್ ಪ್ರಾಯೋಗಿಕ ತರಬೇತಿ ಶಿಬಿರವನ್ನು ಮೇ 3 ರಂದು ಅಪರಾಹ್ನ 3:30 ಗಂಟೆಗೆ ಕಂಕನಾಡಿಯ ಜಮೀಯತುಲ್ ಲಾಹ್ ಹಾಲ್ ನಲ್ಲಿ ಆಯೋಜಿದಲಾಗಿದೆ.

ಈ ಕಾರ್ಯಕ್ರಮದಲ್ಲಿ ಯುನಿವೆಫ್ ಕರ್ನಾಟಕ ಅಧ್ಯಕ್ಷ ಮತ್ತು ಉಳ್ಳಾಲ ನಿಮ್ರಾ ಮಸೀದಿಯ ಖತೀಬ್ ರಫೀಉದ್ದೀನ್ ಕುದ್ರೋಳಿಯವರು ಹಜ್ ಮತ್ತು ಉಮ್ರಾಃ ದ ವಿಧಿವಿಧಾನಗಳ ಬಗ್ಗೆ ಪ್ರಾಯೋಗಿಕವಾಗಿ ಪ್ರಾತ್ಯಕ್ಷಿಕೆ ಸಹಿತ ತರಬೇತಿ ನೀಡಲಿದ್ದಾರೆ.ಹಜ್ ಕರ್ಮದ ಬಗ್ಗೆ ಹಾಜಿಗಳ ಸಂಶಯಗಳಿಗೆ ಸರಿಯಾದ ಮಾಹಿತಿಯನ್ನೂ ನೀಡಲಿರುವರು.







ಹಜ್ ಕರ್ಮದ ವಿವಿಧ ಆಯಾಮಗಳ ಛಾಯಾಚಿತ್ರ ಪ್ರದರ್ಶನವನ್ನು ಕೂಡಾ ಈ ಸಂದರ್ಭದಲ್ಲಿ ಏರ್ಪಡಿಸಲಾಗುವುದು ಎಂದು ಸಂಚಾಲಕ ನೌಫಲ್ ಹಸನ್ ತಿಳಿಸಿದ್ದಾರೆ. ಹೆಚ್ವಿನ ಮಾಹಿತಿಗಾಗಿ ಸಂಚಾಲಕರ ಮೊಬೈಲ್ ಸಂಖ್ಯೆ 8310598907 ಯನ್ನು ಸಂಪರ್ಕಿಸಬೇಕೆಂದು ಪ್ರಕಟನೆ ತಿಳಿಸಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version