ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಪುತ್ತೂರು – ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಕಾಡಾನೆ

Published

on

ಪುತ್ತೂರು ಜೂನ್ 07: ಕಾಡಾನೆಯೊಂದು ಜನವಸತಿ ಹೆಚ್ಚಿರುವ ಪ್ರದೇಶದಲ್ಲಿ ಕಾಣಿಸಿಕೊಂಡ ಘಟನೆ ಪುತ್ತೂರಿನ ಕೆಯ್ಯೂರು ಗ್ರಾಮದ ಎರೆಕಲಾ ಎಂಬಲ್ಲಿ ನಡೆದಿದೆ.
ದಟ್ಟ ಅರಣ್ಯದಿಂದ ಆಹಾರ ಹುಡುಕಿ ಜನವಸತಿ ಪ್ರದೇಶಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು. ಎರೆಕಲಾದಲ್ಲಿರುವ ಕಾಡಿನಲ್ಲಿ ಆನೆ ಪತ್ತೆಯಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಈ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಕಾಡಾನೆ ಪತ್ತೆಯಾಗಿದೆ. ಸದ್ಯ ಕಾಡಾನೆಯನ್ನು ಓಡಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ನಿರತರಾಗಿದ್ದಾರೆ. ಆನೆ ಬಂದಿರುವ ಪೆರ್ಲಂಪಾಡಿ ಕಾಡಿನತ್ತ ಆನೆಯನ್ನು ಓಡಿಸಲು ಪ್ರಯತ್ನಿಸಲಾಗುತ್ತಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version