ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಕೆದಿಲ ಅನುದಾನಿತ ಹಿ ಪ್ರಾ ಶಾಲಾ ನೂತನ ಕೊಠಡಿಗಳ ಉದ್ಘಾಟನೆ

Published

on

ದಾನಿಗಳ ಮೂಲಕ ಶಾಲಾ ಕಟ್ಟಡ ನಿರ್ಮಾಣ ಮಾಡಿರುವುದು ಅಭಿನಂದನಾರ್ಹ: ಅಶೋಕ್ ರೈ

ಪುತ್ತೂರು: ಊರಿನ ಹಾಗೂ ಇತರೆ ದಾನಿಗಳ ನೆರವಿನಿಂದ ತಮ್ಮ ಗ್ರಾಮದಲ್ಲಿ ಪಾಳು ಬಿದ್ದ ಶಾಲೆಯನ್ನು ನವೀಕರಣ ಮಾಡಿದ್ದು ಅಭಿನಂದನಾರ್ಹ ಕಾರ್ಯಕವಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಕೆದಿಲ ಅನುದಾನಿತ ಹಿ ಪ್ರಾ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಇದೇ ಶಾಲೆಯ ಶೌಚಾಲಯಕ್ಕೆ 5ಲಕ್ಷ ಅನುದಾನ ನೀಡುವುದಾಗಿ ಘೋಷಣೆ ಮಾಡಿದರು.
ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮದ ಶಿಕ್ಷ ಅತೀ ಅಗತ್ಯವಾಗಿದೆ. ಬಡವರ ಮಕ್ಕಳೂ ಇಂಗ್ಲೀಷ್ ಮಾತನಾಡಬೇಕು, ಒಳ್ಳೆಯ ಕೆಲಸವನ್ನು ಪಡೆಯಬೇಕು ಇಲ್ಲಿ ಶಿಕ್ಷಕರ ಕೊರತೆ ನೀಗಿಸುವಂತೆಯೂ ಶಿಕ್ಷಣ ಇಲಾಖೆಗೆ ಸೂಚನೆ ನೀಡಿರುವುದಾಗಿ ಶಾಸಕರು ಹೇಳಿದರು. ಕೆಪಿಎಸ್ ಸಿ ಮಾದರಿ ಶಾಲೆಗಳು ಎಲ್ಲಾ ಕಡೆ ಆರಂಭ ಮಾಡುವ ಬಗ್ಹೆ ಸರಕಾರದ ಆಲೋಚನೆ ಇದೆ. 13500 ಶಿಕ್ಷಕರನ್ನು ಸರಕಾರ ನೇಮಕ ಮಾಡಿದೆ. ಸರಕಾರಿ ಶಾಲೆಯಲ್ಲಿ ಎಲ್ಲೂ ಶಿಕ್ಷಕರ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

ಶಾಲೆಗಳಲ್ಲಿ ರಾಜಕೀಯ ತರಬೇಡಿ

ಶಾಲೆ, ದೇವಸ್ಥಾನಗಳಲ್ಲಿ ರಾಜಕೀಯ ತರಬಾರದು. ಈ ಎರಡೂ ಕಡೆಗಳಲ್ಲಿ ರಾಜಕೀಯ ಮಾಡಿದ್ರೆ ಅವುಗಳು ಹಾಳಾಗುತ್ತದೆ ರಾಜಕೀಯದಲ್ಲಿದ್ದವರು ಯಾರೂ ಶಿಕ್ಷಣ ಸಂಸ್ಥೆಯಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದರು.
ಮಾಜಿ ಶಾಸಕರಾದ ಸಂಜೀವ ಮಟಂದೂರು ಮಾತನಾಡಿ ಕೆದಿಲದಲ್ಲಿ ಇತಿಹಾಸ ನಿರ್ಮಾಣವಾಗಿದೆ. ಇಲ್ಲಿನ ಹಳೆ ವಿದ್ಯಾರ್ಥಿಗಳ ಪರಿಶ್ರಮದಿಂದ ಶಾಲೆಗೆ ಹೊಸ ಕಳೆ ಬಂದಿದೆ. ಶಿಕ್ಷಣಕ್ಕೆ ನಾವು ಹೆಚ್ಚು ಒತ್ತು ಕೊಡುವ ಅವಶ್ಯಕತೆ ಇದೆ ಎಂದು ಹೇಳಿದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version