Published
7 months agoon
By
Akkare Newsಪುತ್ತೂರು: ನರಿಮೊಗರು ಗ್ರಾಮದ ವೀರಮಂಗಲ, ಕಾಯರ್ ಮುಗೇರು, ಪಲ್ಲತ್ತೋಡಿ, ಆನಾಜೆ ಪರಿಸರದಲ್ಲಿ ಜೂ9ರಂದು ಆನೆ ಪ್ರತ್ಯಕ್ಷವಾಗಿದ್ದು, ಸ್ಥಳೀಯ ಕೃಷಿ ತೋಟಗಳಿಗೆ ಹಾನಿ ಮಾಡಿದೆ ಎಂದು ತಿಳಿದು ಬಂದಿದೆ.
ಓಲೆಮುಂಡೋವು ಏರಬೈಲ್ ಪರಿಸರದಲ್ಲಿ ಎರಡು ದಿನಗಳ ಹಿಂದೆ ಇದ್ದ ಆನೆ ಇದೀಗ ವೀರಮಂಗಲ ಪರಿಸರಕ್ಕೆ ಬಂದಿರಬಹುದು ಎಂದು ಸಂಶಯಿಸಲಾಗಿದೆ. ಅರಣ್ಯ ಇಲಾಖೆಯವರು ಆನೆಯನ್ನು ಕಾಡಿಗೆ ಅಟ್ಟುವ ಕೆಲಸ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.