Published
6 months agoon
By
Akkare Newsಪಾರ್ಕಿಂಗ್ ವಿಚಾರದಲ್ಲಿ ಮಾತಿನ ಚಕಮಕಿ
ಪುತ್ತೂರು: ಪುತ್ತೂರು ಕೋರ್ಟ್ ರಸ್ತೆಯಲ್ಲಿ ವಾಹನ ಪಾರ್ಕಿಂಗ್ ವಿಚಾರದಲ್ಲಿ ಮಾತಿನ ಚಕಮಕಿ ನಡೆದು ವ್ಯಕ್ತಿಯೊಬ್ವರಿಗೆ ಚೂರಿ ಇರಿದ ಘಟನೆ ಜೂ.13ರಂದು ಮಧ್ಯಾಹ್ನ ನಡೆದಿದೆ.
ದರ್ಬೆ ನಿವಾಸಿ ಸದಾಶಿವ ಪೈ ಅವರಿಗೆ ವ್ಯಕ್ತಿಯೊಬ್ವರು ಚೂರಿ ಇರಿದಿದ್ದಾರೆ.
ಊರಮಾಲ್ ನಿವಾಸಿ ಗುಣಶೇಖರ ಚೂರಿ ಇರಿದಿರುವುದಾಗಿ ಹೇಳಲಾಗಿದೆ. ಸದ್ಯ ಕೈಗೆ ಗಾಯವಾದ ಸದಾಶಿವ ಪೈ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಗುಣಶೇಖರ ಎಂಬವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆಂದು ತಿಳಿದು ಬಂದಿದೆ.