ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಮೀಸಲು ಪೊಲೀಸ್ ಘಟಕಗಳಿಗೆ ನೇಮಕಾತಿ

Published

on

ಬೆಂಗಳೂರು : 2023-24ನೇ ಸಾಲಿಗೆ 1500 ಪೊಲೀಸ್‌ ಹುದ್ದೆಗಳ ನೇಮಕಾತಿ ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ.

ಹುದ್ದೆಗಳ ವಿವರ

ಕಲ್ಯಾಣ ಕರ್ನಾಟಕೇತರ ಹುದ್ದೆಗಳು : 886

ಕಲ್ಯಾಣ ಕರ್ನಾಟಕ ವೃಂದ ಹುದ್ದೆಗಳು :614

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಹಾಗೂ ವಿಶೇಷ ಮೀಸಲು ಪೊಲೀಸ್ ಪಡೆಯ (ಸ್ಪೆಷಲ್ ಆರ್‌ಪಿಸಿ) ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು 10ನೇ ತರಗತಿ ಪಾಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಈ ಎರಡೂ ಹುದ್ದೆಗಳಿಗೆ ನಿಗದಿಪಡಿಸಿದ ದೈಹಿಕ ಅರ್ಹತೆ ಉಳ್ಳವರಾಗಿರಬೇಕು.

ವಯೋಮಿತಿ ವಿವರ ನೋಡುವುದಾದರೆ ಕೆಎಸ್‌ಆರ್‌ಪಿ ಮತ್ತು ಎಸ್‌ಆರ್‌ಪಿಸಿ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ, ಎಸ್‌ಸಿ / ಎಸ್‌ಟಿ / ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 27 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

ಕೆಎಸ್‌ಆರ್‌ಪಿ ಹಾಗೂ ಎಸ್‌ಆರ್‌ಪಿಸಿ ಪಡೆಯ 1,500 ಖಾಲಿ ಹುದ್ದೆಗಳನ್ನು ಈ ಕೆಳಕಂಡ ವಿವಿಧ ಜಿಲ್ಲೆಗಳ ಮೀಸಲು ಪೊಲೀಸ್ ಘಟಕಗಳಿಗೆ ನೇಮಕಾತಿ ನಡೆಸಲಾಗುತ್ತೆ

ಮಂಗಳೂರು

ಶಿವಮೊಗ್ಗ

ಶಿಗ್ಗಾವಿ

ಹಾಸನ

ಬೆ೦ಗಳೂರು

ಬೆಳಗಾವಿ

ಮೈಸೂರು

ಕಲಬುರಗಿ

ತುಮಕೂರು

ಮುನಿರಾಬಾದ್

ಹುದ್ದೆಗಳ ವರ್ಗೀಕರಣ

ಎಸ್‌ಆರ್‌ಪಿಸಿ (ಪುರುಷ) ಮಿಕ್ಕುಳಿದ ವೃಂದದ ನೇಮಕಾತಿ ಹುದ್ದೆಗಳು 1392

ಕ್ರೀಡಾಪಟುಗಳಿಗೆ ಶೇಕಡ 2 ರಂತೆ ಎಸ್‌ಆರ್‌ಪಿಸಿ (ಪುರುಷ) (ಮಹಿಳೆ) ಕಲ್ಯಾಣ ಕರ್ನಾಟಕೇತರ ಒಟ್ಟು ಹುದ್ದೆಗಳು 30

ಎಸ್‌ಆರ್‌ಪಿಸಿ (ಮಹಿಳೆ) ಮಿಕ್ಕುಳಿದ ವೃಂದದ ನೇಮಕಾತಿ ಹುದ್ದೆಗಳು 78

ಎಸ್‌ಆರ್‌ಪಿಸಿ (ಪುರುಷ) ಕಲ್ಯಾಣ ಕರ್ನಾಟಕ ವೃಂದದ ನೇಮಕಾತಿ ಹುದ್ದೆಗಳು 591

ಕ್ರೀಡಾಪಟುಗಳಿಗೆ ಶೇಕಡ 2 ರಂತೆ ಎಸ್‌ಆರ್‌ಪಿಸಿ (ಪುರುಷ) (ಮಹಿಳೆ) ಕಲ್ಯಾಣ ಕರ್ನಾಟಕ ಹುದ್ದೆಗಳು 12

ಎಸ್‌ಆರ್‌ಪಿಸಿ (ಮಹಿಳೆ) ಕಲ್ಯಾಣ ಕರ್ನಾಟಕ ವೃಂದದ ನೇಮಕಾತಿ ಹುದ್ದೆಗಳು 11

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version