Published
6 months agoon
By
Akkare Newsಕರ್ನಾಟಕ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಹಾಗು ಕೋಡಿಂಬಾಡಿ ಪಂಚಾಯತ್ , ರೈ ಚಾರಿಟಬಲ್ ಟ್ರಸ್ಟ್ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರ ಆಶ್ರಯದಲ್ಲಿ ನೋಂದಾಯಿತ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ದಿನಾಂಕ 23/06/24 ಆದಿತ್ಯವಾರ ಬೆಳಿಗ್ಗೆ,10.00 ಕ್ಕೆ ಕೊಡಿoಬಾಡಿ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಕೊಡಿoಬಾಡಿ ಶಾಲಾ ಸಭಾಭವನದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಶಿಬಿರಕ್ಕೆ ಬರುವಾಗ ಕಡ್ಡಾಯವಾಗಿ ಮಂಡಳಿಯಿಂದ ನೀಡಲಾದ ನೋಂದಣಿ ಕಾರ್ಡ್, ಆಧಾರ್ ಕಾರ್ಡ್ ಮತ್ತು ಅವಲಂಬಿತರು ಕಡ್ಡಾಯವಾಗಿ ಆಧಾರ್ ಕಾರ್ಡ್ ತರತಕ್ಕದ್ದು.
ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ಸೂಚಿಸಲಾಗಿದೆ.
ಅಧ್ಯಕ್ಷರು, ಉಪಾಧ್ಯಕ್ಷರು ಹಾಗು ಸರ್ವ ಸದಸ್ಯರು ಕೋಡಿಂಬಾಡಿ ಪಂಚಾಯತ್ ಪುತ್ತೂರು ತಾಲೂಕು
1. *ವೈದ್ಯರ ಸಲಹೆ*
2. *ಯಕೃತ್ ಕಾರ್ಯ ಪರೀಕ್ಷೆ*
3. *ಶ್ರವಣ ಪರದ ಪರೀಕ್ಷೆ*
4. *ದೃಷ್ಟಿ ಪರದ ಪರೀಕ್ಷೆ*
5. *ಸಿಬಿಸಿಐ (CBC) ಪರೀಕ್ಷೆ*
6. *ಇಎಸ್‌ಆರ್ (ESR) ಪರೀಕ್ಷೆ*
7. *ಎಚ್‌ಬಿಎ1ಸಿ (HbA1c) ಪರೀಕ್ಷೆ*
8. *ಮೂತ್ರಪಿಂಡದ ಪರೀಕ್ಷೆ*
9. *ಲಿಪಿಡ್ ಪ್ರೊಫೈಲ್ ಪರೀಕ್ಷೆ*
10. *ಮಲೇರಿಯಾ ಪ್ಯಾರಾಸೈಟ್ ಪರೀಕ್ಷೆ*
11. *ಟಿ3, ಟಿ4, ಟಿಎಸ್ಎಚ್ (T3, T4, TSH) ಪರೀಕ್ಷೆ*
12. *ಸೀರಮ್ ಕಬ್ಬಿಣ (SERUM IRON) ಪರೀಕ್ಷೆ*
13. *ಸೀರಮ್ ಮೆಗ್ನೀಶಿಯಂ (SERUM MAGNESIUM) ಪರೀಕ್ಷೆ*
14. *ಜಿಜಿಟಿಪಿ (GGTP) ಪರೀಕ್ಷೆ*
15. *ಸಿಆರ್‌ಪಿ ಪ್ರಮಾಣಾತ್ಮಕ ಪರೀಕ್ಷೆ (CRP QUANTITATIVE TEST)*
16. *ಸೀರಮ್ ಫೆರಿಟಿನ್ (SERUM FERRITIN) ಪರೀಕ್ಷೆ*
17. *ಹೆಚ್‌ಐವಿ, ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ, ವಿಡಿಆರ್‌ಎಲ್ (HIV, HEPATITIS B, HEPATITIS C, VDRL) ಪರೀಕ್ಷೆ*
18. *ರಕ್ತ ಗುಂಪು ಪರೀಕ್ಷೆ*