Published
6 months agoon
By
Akkare Newsಉಪ್ಪಿನಂಗಡಿ, ಜೂ.21. ಇಲ್ಲಿನ ಮುಖ್ಯ ಪೇಟೆಯ ಕಾಂಪ್ಲೆಕ್ಸ್ ನಲ್ಲಿನ ಹಲವು ಅಂಗಡಿಗಳು ಬೆಂಕಿಗಾಹುತಿಯಾಗಿದ್ದು, ಅಕ್ಷರಶಃ ಬೆಂಕಿಯ ಕೆನ್ನಾಲಗೆಗೆ ಬೆಂದಿದೆ.
ನೂರಾರು ನಾಗರಿಕರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ಬೆಂಕಿಯ ಕೆನ್ನಾಲಗೆಗೆ ಹಲವು ಅಂಗಡಿಗಳು ಆಹುತಿಯಾಗಿವೆ. ಏಕಾಏಕಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಅಂಗಡಿಯವರು ಬೆಂಕಿಯನ್ನು ಆರಿಸಲು ಯತ್ನಿಸಿದರಾದರೂ ಅದಾಗಲೇ ಹಲವು ಅಂಗಡಿಗಳು ಬೆಂಕಿಗೆ ಆಹುತಿಯಾಗಿತ್ತು. ಬೆಂಕಿ ನಂದಿಸುವ ಕಾರ್ಯ ಬರದಿಂದ ನಡೆಯುತ್ತಿದ್ದು, ಇನ್ನೂ ಹತೋಟಿಗೆ ಬಂದಿಲ್ಲ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.