Published
6 months agoon
By
Akkare Newsಪುತ್ತೂರು: ಕೋಡಿಂಬಾಡಿಯ ವನಿತಾ ಸಮಾಜದ ನೂತನ ಅಧ್ಯಕ್ಷರಾಗಿ ರಶ್ಮಿ ನಿರಂಜನ್ ರೈ ಮಠಂತಬೆಟ್ಟು ಮತ್ತು ಕಾರ್ಯದರ್ಶಿಯಾಗಿ ಪವಿತ್ರ ಸುರೇಶ್ ಶೆಟ್ಟಿ ಬರಮೇಲು ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷೆ ಧರ್ಮಾವತಿ ರಾಘವೇಂದ್ರ ಆಚಾರ್ಯ ಸೇಡಿಯಾಪುರವರ ಅಧ್ಯಕ್ಷತೆಯಲ್ಲಿ ಜೂ.16ರಂದು ಕೋಡಿಂಬಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಪೂರ್ಣಿಮಾ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಪಾಧ್ಯಕ್ಷರಾಗಿ ರಾಧಿಕಾ ರಮೇಶ್ ಸಾಮಂತ್ ನೆಕ್ಕರಾಜೆ, ಜೊತೆ ಕಾರ್ಯದರ್ಶಿಯಾಗಿ ಹರಿಣಾಕ್ಷಿ ರಮೇಶ್ ಭಂಡಾರಿ ಕೈಪ, ಕೋಶಾಧಿಕಾರಿಯಾಗಿ ಕುಸುಮ ವಿಜಯ್ ರೈ ಸರೋಳಿ, ಗೌರವ ಸಲಹೆಗಾರಾಗಿ ಭಾರತಿ ದೇವಾನಂದ ಕೋಡಿ, ದೇಜಮ್ಮ ಗುಣಪಾಲ ಹೆಗ್ಡೆ ಮಿತ್ತಳಿಕೆ ಮತ್ತು ಧರ್ಮಾವತಿ ರಾಘವೇಂದ್ರ ಆಚಾರ್ಯ ಸೇಡಿಯಾಪು ಅವರನ್ನು ಆಯ್ಕೆ ಮಾಡಲಾಯಿತು.
ತಾಲೂಕು ಮಹಿಳಾ ಒಕ್ಕೂಟದ ಕಾರ್ಯದರ್ಶಿ ಪೂರ್ಣಿಮ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ಉಪಸ್ಥಿತರಿದ್ದರು. ಇತ್ತಿಚೆಗೆ ಅಗಲಿದ ವನಿತಾ ಸಮಾಜದ ಸ್ಥಾಪಕ ಅಧ್ಯಕ್ಷೆ ಗುಣವತಿ ಆರ್. ಅರಿಗ ಬಾರಿಕೆ ಮತ್ತು ಗುಲಾಬಿ ಅನಂತ ರೈ ಮಠಂತಬೆಟ್ಟುರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಾಧಿಕ ರಮೇಶ್ ಸಾಮಂತ್ ಶ್ರದ್ಧಾಂಜಲಿ ಅರ್ಪಿಸಿದರು. ನಿಕಟಪೂರ್ವ ಅಧ್ಯಕ್ಷೆ ಧರ್ಮಾವತಿ ಮಾತನಾಡಿ ತನ್ನ ಅವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ನೂತನ ಅಧ್ಯಕ್ಷೆ ರಶ್ಮಿ ರೈ ಮಾತನಾಡಿ ಸರ್ವರ ಸಹಕಾರ ಕೋರಿದರು. ಹರಿಣಾಕ್ಷಿ ರಮೇಶ್ ಭಂಡಾರಿ ಪ್ರಾರ್ಥಿಸಿದರು. ಭಾರತಿ ದೇವಾನಂದ ಸ್ವಾಗತಿಸಿ ವರದಿ ಮಂಡಿಸಿದರು. ಧರ್ಮಾವತಿ ಸೇಡಿಯಾಪು ವಂದಿಸಿದರು.