Published
6 months agoon
By
Akkare Newsಪುತ್ತೂರು: ತಾಲೂಕು ಬಂಟರ ಸಂಘದ ಮಹಾಸಭೆಯು ಜೂ. 22 ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು.
ಪುತ್ತೂರು ತಾ। ಬಂಟರ ಸಂಘದ ಮಹಾಸಭೆ-…ತನ್ನ ಸೇವಾವಧಿಯಲ್ಲಿ ಸಮಾಜಮುಖಿ ಕಾರ್ಯ- ಶಶಿಕುಮಾರ್ ರೈ:
ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಗೊಟ್ಟುರವರು ಮಾತನಾಡಿ ನನ್ನ ಸೇವಾವಧಿಯ ಒಂದುವರೆ ವರ್ಷಗಳ ಅರ್ವಯಲ್ಲಿ ಸಮಾಜಕ್ಕೆ ಒಳಿತಾಗುವ ಕಾರ್ಯವನ್ನು ಮಾಡಿದ್ದೇನೆ ಎಂಬ ಸಂತೃಪ್ತಿ ಇದೆ.
ಸಂಘದ 23 ವರ್ಷದ ಆಡಿಟ್ ವರದಿಯ ಕೆಲಸವನ್ನು ಮಾಡಲಾಗಿದ್ದು, ಎಲ್ಲರೂ ಪೂರ್ಣ ಸಹಕಾರವನ್ನು ನೀಡಿದ್ದಾರೆ. ತಾಲೂಕು ಬಂಟರ ಸಂಘಕ್ಕೆ ಸ್ವಂತ ಜಾಗ ಖರೀದಿ ಮಾಡಬೇಕೆಂಬ ಉದ್ದೇಶದಿಂದ ಕಾರ್ಯಆರಂಭಿಸಿದಾಗ ಕಾನೂನಿನ ತೊಡಕು ಬಂದ ಕಾರಣ ಜಾಗ ಖರೀದಿ ಮಾಡಲು ಆಗಲಿಲ್ಲ ಎಂದು ತಿಳಿಸಿದರು.ಬಂಟರ ಸಂಘದ ಮೂಲಕ ಅನೇಕ ಜನೋಪಯೋಗಿ ಕಾರ್ಯವನ್ನು ಮಾಡಲಾಗಿದೆ, ಇದಕ್ಕೆ ಎಲ್ಲರ ಪೂರ್ಣ ಸಹಕಾರ ದೊರೆತಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಕಾವು ಹೇಮನಾಥ ಶೆಟ್ಟಿಯವರ ನೇತೃತ್ವದ ಹೊಸ ತಂಡಕ್ಕೆ ಪೂರ್ಣ ಸಹಕಾರವನ್ನು ನೀಡುತ್ತೇನೆ ಎಂದು ಹೇಳಿದರು.
ಅಧಿಕಾರ ಅಲ್ಲ ಅವಕಾಶ- ಹೇಮನಾಥ ಶೆಟ್ಟಿ:
ನೂತನ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಬಂಟರ ಸಂಘದ ನೂತನ ಅಧ್ಯಕ್ಷನಾಗುವ ಯೋಗ ಕೂಡಿ ಬಂತು. ಪುತ್ತೂರು ಮತ್ತು ಕಡಬ ತಾಲೂಕಿನ ಪ್ರತಿ ಗ್ರಾಮದಲ್ಲಿ ಇರುವ ಬಂಟರ ಮಾಹಿತಿಯನ್ನು ಆಗೋಸ್ಟ್ ತಿಂಗಳ ಒಳಗೆ ಪೂರ್ಣ ಮಾಡಲಾಗುವುದು, ಆ ಮೂಲಕ ಬಂಟರ ಪೂರ್ಣ ಮಾಹಿತಿ ಲಭ್ಯವಾಗುತ್ತದೆ ಎಂದು ಹೇಳಿದರು. ಸಂಘದ ಅಧ್ಯಕ್ಷ ಸ್ಥಾನ ಅಧಿಕಾರ ಅಲ್ಲ ಅವಕಾಶ ಎಂದು ಹೇಳಿದ ಅವರು, ಬಂಟರ ಸಂಘದ ಅಭಿವೃದ್ಧಿ ಕಾರ್ಯಕ್ಕೆ ಸ್ವಂತ ಜಾಗ ಆಗಬೇಕೆಂಬ ಉದ್ದೇಶದಿಂದ ಕೆಮ್ಮಿಂಜೆ ಗ್ರಾಮದಲ್ಲಿ 5.50 ಎಕ್ರೆ ಜಾಗವನ್ನು ಗುರುತಿಸಿದ್ದು, ಮುಂದಿನ ದಿನಗಳಲ್ಲಿ ಇದರ ಕೆಲಸ ನಡೆಯಲಿದೆ ಎಂದರು. ಬಂಟರ ಸಂಘದ ಅಧ್ಯಕ್ಷರಾಗಿ ಶಶಿಕುಮಾರ್ ರೈ ಬಾಲ್ಗೊಟ್ಟುರವರು ಉತ್ತಮ ಕೆಲಸವನ್ನು ಮಾಡಿ ಸಂಘವನ್ನು ಬೆಳೆಸಿದ್ದಾರೆ ಅದೇ ರೀತಿ ಸಂಘದ ಪೂರ್ವಾಧ್ಯಕ್ಷರುಗಳು ಕೂಡ ಉತ್ತಮವಾದ ಕೆಲಸವನ್ನು ಮಾಡಿ, ಸಂಘವನ್ನು ಬೆಳೆಸಿದ್ದಾರೆ. ಎಲ್ಲರ ಸಹಕಾರ, ಪ್ರೋತ್ಸಾಹವನ್ನು ಸದಾ ಬಯಸುತ್ತೇನೆ. ಮಾಜಿ ಅಧ್ಯಕ್ಷರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಉತ್ತಮವಾದ ಕೆಲಸವನ್ನು ಮಾಡುತ್ತೇನೆ ಎಂದು ಹೇಮನಾಥ ಶೆಟ್ಟಿ ಹೇಳಿದರು.
ಸಂಘದ ಪುಸ್ತಕ ಹಸ್ತಾಂತರ:
ಕಾವು ಹೇಮನಾಥ ಶೆಟ್ಟಿಯವರ ತಂಡಕ್ಕೆ ಶಶಿಕುಮಾರ್ ರೈ ಬಾಲ್ಯೂಟ್ಟು ತಂಡ ಸಂಘದ ಪುಸ್ತಕವನ್ನು ಈ ಸಂದರ್ಭದಲ್ಲಿ ಹಸ್ತಾಂತರ ಮಾಡಿದರು.
ಚುನಾವಣಾಧಿಕಾರಿ ಬಾಲಕೃಷ್ಣ ರೈಯವರಿಂದ ಘೋಷಣೆ:
ಸಂಘದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಜಿ ಹಾಗೂ ಮೂರು ಹೋಬಳಿಗಳ 22 ನಿರ್ದೇಶಕರ ಸ್ಥಾನಗಳಿಗೆ ಜೂ.22ರಂದು ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಾವು ಹೇಮನಾಥ ಶೆಟ್ಟಿಯವರು ಮಾತ್ರವೇ ನಾಮಪತ್ರ ಸಲ್ಲಿಸಿದ್ದರು.ಉಳಿದಂತೆ ಪ್ರಧಾನ ಕಾಯದರ್ಶಿ ಸ್ಥಾನಕ್ಕೆ ಎರಡು ಹಾಗೂ ಕೋಶಾಧಿಕಾರಿ ಸ್ಥಾನಕ್ಕೆ 4 ಹಾಗೂ ಪುತ್ತೂರು, ಕಡಬ, ಉಪ್ಪಿನಂಗಡಿ ಹೋಬಳಿಯ ಒಟ್ಟು 22 ನಿರ್ದೇಶಕರುಗಳ ಸ್ಥಾನಕ್ಕೆ 32 ಮಂದಿ ನಾಮಪತ್ರ ಸಲ್ಲಿಸಿದ್ದರು.
ಘೋಷಣೆ ಪತ್ರ ಸ್ವೀಕಾರ:
ಸಂಘದ ನೂತನ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಹಾಗೂ ಕೋಶಾಧಿಕಾರಿ ಸಂತೋಷ್ ಶೆಟ್ಟಿ ‘ಆಕಾಂಕ್ಷ’ ನೆಹರೂನಗರ, ನೂತನ ನಿರ್ದೇಶಕರಾಗಿ ಆಯ್ಕೆಯಾದ ಪುತ್ತೂರು ಹೋಬಳಿಯ ಸಂಜೀವ ಆಳ್ವ ಹಾರಾಡಿ,ಪಿ.ಸುಧೀರ್ ಶೆಟ್ಟಿ ತೆಂಕಿಲ, ನಿತಿನ್ ಪಕ್ಕಳ ಮರೀಲ್, ಸತೀಶ್ ರೈ ಕಟ್ಟಾವು. ರವೀಂದ್ರ ಶೆಟ್ಟಿ ನುಳಿಯಾಲು, ರಮೇಶ್ ರೈ ಡಿಂಬ್ರಿ, ಸ್ವರ್ಣಲತಾ ಜೆ.ರೈ,ಸದಾಶಿವ ರೈ ಸೂರಂಬೈಲು,ಶಶಿಕಿರಣ್ ರೈ ನೂಜಿಬೈಲು, ಸಹಕಾರ ರತ್ನ’ ದಂಬೆಕ್ಕಾನ ಸದಾಶಿವ ರೈ, ಶಿವನಾಥ ರೈ ಮೇಗಿನಗುತ್ತು,ರಮೇಶ್ ಆಳ್ವ ಅಲೆಪ್ಪಾಡಿ, ಕಡಬ ಹೋಬಳಿಯ ದಯಾನಂದ ರೈ ಮನವಳಿಕೆಗುತ್ತು, ರಾಧಾಕೃಷ್ಣ ರೈ ಪರಾರಿಗುತ್ತು, ಸುಭಾಸ್ ಕುಮಾರ್ ಶೆಟ್ಟಿ ಅರುವಾರ,ಪ್ರಕಾಶ್ ರೈ ಸಾರಕರೆ, ಇಂದುಶೇಖರ್ ಶೆಟ್ಟಿ ಕುಕ್ಕೇರಿ, ಪುಲಸ್ಯ ವಿ.ರೈ ಕುಂಟೋಡಿ ಹಾಗೂ ಉಪ್ಪಿನಂಗಡಿ ಹೋಬಳಿಯ ಶಶಿರಾಜ್ ರೈ ನೆಕ್ಕಿಲಾಡಿ,ಜಯಾನಂದ ಬಂಟ್ರಿಯಾಲ್,ರವಿಪ್ರಸಾದ್ ಶೆಟ್ಟಿ ಬನ್ನೂರು, ಹರಿಣಾಕ್ಷಿ ಜೆ.ಶೆಟ್ಟಿರವರುಗಳು ಘೋಷಣಾ ಪತ್ರವನ್ನು ಸ್ವೀಕಾರ ಮಾಡಿದರು.
ಸನ್ಮಾನ:
ಸಂಘದ ನಿರ್ಗಮಿತ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೂಟ್ಟು, ಪ್ರಧಾನ ಕಾಯದರ್ಶಿ ರಮೇಶ್ ರೈ ಡಿಂಬ್ರಿ ಹಾಗೂ ಕೋಶಾಧಿಕಾರಿ ಕೃಷ್ಣ ಪ್ರಸಾದ್ ಆಳ್ವರವರನ್ನು ಬಂಟರ ಸಂಘದ ನೂತನ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಂಡದಿಂದ ಸನ್ಮಾನಿಸಲಾಯಿತು. ಅದೇ ರೀತಿ ನೂತನ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಹಾಗೂ ಕೋಶಾಧಿಕಾರಿ ಸಂತೋಷ್ ಶೆಟ್ಟಿಯವರನ್ನು ನಿರ್ಗಮಿತ ಅಧ್ಯಕ್ಷ ಶಶಿಕುಮಾರ್ ರೈಯವರ ತಂಡದಿಂದ ಸನ್ಮಾನಿಸಿ, ಗೌರವಿಸಲಾಯಿತು.
ಚುನಾವಣಾಧಿಕಾರಿಗೆ ಸನ್ಮಾನ:
ಸಂಘದ ಚುನಾವಣೆಯನ್ನು ಸುಸೂತ್ರವಾಗಿ ನಡೆಸಿಕೊಟ್ಟ ಹಿರಿಯ ವಕೀಲ ಅರಂತನಡ್ಕ ಬಾಲಕೃಷ್ಣ ರೈಯವರನ್ನು ಬಂಟರ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ರವಿಚಂದ್ರ ರೈಯವರಿಗೆ ಸನ್ಮಾನ:
ಬಂಟರ ಭವನದ ಮೇನೇಜರ್ ರವಿಚಂದ್ರ ರೈ ಕುಂಬ್ರರವರನ್ನು ಬಂಟರ ಸಂಘದಿಂದ ಸನ್ಮಾನಿಸಿ, ಗೌರವಿಸಲಾಯಿತು ಸಂಘದ ಕಾಯದರ್ಶಿ ರಮೇಶ್ ರೈ ಡಿಂಬ್ರಿ ವರದಿ ವಾಚನ ಮಾಡಿದರು. ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಲೆಕ್ಕಪತ್ರ ವಾಚಿಸಿದರು. ವತ್ಸಲಾ ಪಿ.ಶೇಟ್ಟಿ ಪ್ರಾರ್ಥನೆಗೈದರು. ಸಮಾರಂಭದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ‘ಸಹಕಾರ ರತ್ನ’ ಸವಣೂರು ಸೀತಾರಾಮ ರೈ, ದಯಾನಂದ ರೈ ಮನವಳಿಕೆಗುತ್ತು, ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ, ಬೂಡಿಯಾರ್ ರಾಧಾಕೃಷ್ಣ ರೈ, ಮಾತೃ ಸಂಘದ ಸಹಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸಬಿತಾ ಭಂಡಾರಿ, ಯುವ ಬಂಟರ ಸಂಘದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು, ವಿದ್ಯಾರ್ಥಿ ಬಂಟರ ಸಂಘದ ಅಧ್ಯಕ್ಷ ಪವನ್ ಶೆಟ್ಟಿ ಸೇರಿದಂತೆ ಬಂಟರ ಸಂಘದ ಸದಸ್ಯರುಗಳು, ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ಸಂಘದ ಪದಾಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದರು.
ಪೂರ್ಣ ಸಹಕಾರ
ಶಶಿಕುಮಾರ್ ರೈ ಬಾಲ್ಯೂಟ್ಟುರವರ ತಂಡ ಉತ್ತಮವಾದ ಕೆಲಸವನ್ನು ಮಾಡಿದೆ. ಶಶಿಕುಮಾರ್ ರೈರವರು ಬಂಟರ ಸಂಘದ ಅಧ್ಯಕ್ಷ ಅವಧಿ ಒಂದುವರೆ ವರ್ಷಗಳ ಸಮಯದಲ್ಲಿ ಸಂಘದ ವಿವಿಧ ಚಟುವಟಿಕೆಗಳಿಗೆ 6. 64 ಲಕ್ಷ ರೂಪಾಯಿಯನ್ನು ಸ್ವಂತ ಕೈಯಿಂದ ಹಾಕಿದ್ದಾರೆ. ಇದು ತುಂಬಾ ದೊಡ್ಡ ಉಪಕಾರವಾಗಿದೆ, ಇದು ಅವರಿಗೆ ಬಂಟರ ಸಂಘದ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಗಿದೆ.
ಕಾವು ಹೇಮನಾಥ ಶೆಟ್ಟಿ, ನೂತನ ಅಧ್ಯಕ್ಷರು ಬಂಟರ ಸಂಘ ಪುತ್ತೂರು