Published
6 months agoon
By
Akkare Newsಮಂಗಳೂರು: ರಸ್ತೆ ಬದಿಗಳಲ್ಲಿರುವ ಮಾವು, ಹಲಸು ಹಾಗೂ ಇನ್ನಿತರ ಹಣ್ಣಿನಮರಗಳ ಕಾಯಿಗಳನ್ನು ಏಲಂ ಮಾಡುವ ಪ್ರಕ್ರಿಯೆಯನ್ನು ಜಿಲ್ಲಾಡಳಿತ ರದ್ದು ಮಾಡಿದ್ದುಮುಂದೆ ಸಾರ್ವಜನಿಕ ಸ್ಥಳದಲ್ಲಿರುವ ಮರಗಳ ಹಣ್ಣನ್ನು ಏಲಂ ಮಾಡುವಂತಿಲ್ಲ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಜಿಪಂಸಭಾಂಗಣದಲ್ಲಿ ನಡೆದ ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಅಶೋಕ್ ರೈ ರಸ್ತೆ ಬದಿಯಲ್ಲಿರುವ ಹಣ್ಣಿನಮರಗಳ ಹಣ್ಣುಗಳನ್ನು ಚಿಲ್ಲರೆ ಹಣಕ್ಕಾಗಿ ಏಲಂ ಕರೆಯಲಾಗುತ್ತದೆ. ಏಲಂ ಪಡೆದವರು ಹಣ್ಣು ಕೊಯ್ಯುವ ವೇಳೆಗೆ ಮರಕ್ಕೂ ಹಾನಿ ಮಾಡುತ್ತಾರೆ. ಈ ಹಣ್ಣನ್ನು ಹಾಗೇ ಉಳಿಸಿಕೊಂಡಲ್ಲಿ ಪ್ರಾಣಿ, ಪಕ್ಷಿ ಹಾಗೂ ಮನುಷ್ಯರಿಗೂ ತಿನ್ನಬಹುದು ಯಾವುದೇ ಕಾರಣಕ್ಕೂ ಏಲಂ ಮಾಡದಂತೆ ವ್ಯವಸ್ಥೆ ಆಗಬೇಕು ಎಂದು ಶಾಸಕರು ಮನವಿ ಮಾಡಿದರು.
ಇದಕ್ಕೆ ಉತ್ತರ ನೀಡಿದ ಸಚಿವ ದಿನೇಶ್ ಗುಂಡೂರಾವ್ ಜಿಲ್ಲೆಯಲ್ಲಿಇನ್ನುಮುಂದೆ ಎಲ್ಲಿಯೂ ರಸ್ತೆ ಬದಿಯಲ್ಲಿರುವ ಹಣ್ಣಿನ ಮರಗಳ ಹಣ್ಣನ್ನು ಏಲಂ ನಡೆಸಬಾರದು, ಈ ಬಗ್ಗೆ ಸ್ಥಳೀಯ ಸಂಸ್ಥೆಗೆ ಆದೇಶ ಹೊರಡಿಸಿ ಎಂದು ಜಿಲ್ಲಾಧಿಕಾರಿಗೆ ಸಚಿವರು ಸೂಚನೆ ನೀಡಿದರು. ಮಾವು ಏಲಂ ಮಾಎದಂತೆ ಕಳೆದ ಬಾರಿ ಶಾಸಕ ಅಶೋಕ್ ರೈ ತಡೆದದ್ದನ್ನು ಇಲ್ಲಿ ಸ್ಮರಿಸಬಹುದು.