Published
5 months agoon
By
Akkare Newsಪುತ್ತೂರು: ಹಟ್ಟಿಗೆ ಗುಡ್ಡ ಕುಸಿದು ಹಟ್ಟಿಯಲ್ಲಿದ್ದ ದನಗಳು ಮೃತಪಟ್ಟ ಸ್ಥಳಕ್ಕೆ ಬನ್ನೂರು ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರಭಟ್ ಭೇಟಿ ನೀಡಿದ್ದು ನಾಲ್ಕು ದನಗಳನ್ನು ಕಳೆದುಕೊಂಡ ಗಂಗಯ್ಯ ಗೌಡರಿಗೆ 25ಸಾವಿರ ಮತ್ತು ವಿಶ್ವನಾಥ ಪೂಜಾರಿಯವರಿಗೆ 10ಸಾವಿರ ರೂ ವನ್ನು ವೈಯುಕ್ತಿಕ ನೆಲೆಯಲ್ಲಿ ಪಂಜಿಗುಡ್ಡೆ ಈಶ್ವರಭಟ್‌ರವರು ನೀಡಿದರು.
ಈ ಸಂದರ್ಭದಲ್ಲಿ ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಸದಸ್ಯೆ ಪೂರ್ಣಿಮಾ ಯತೀಶ್ ಶೆಟ್ಟಿ,ಉಷಾ ಲಕ್ಷ್ಮಣ ಪೂಜಾರಿ ಬನ್ನೂರು ರೈತ ಸೇವಾ ಸಹಕಾರಿ ಸಂಗದ ಸದಸ್ಯರಾದ ಸುಬಾಶ್ ನಾಯ್ಕ್ ನೆಕ್ಕರಾಜೆ ಮತ್ತಿತರರು ಉಪಸ್ತಿತರಿದ್ದರು.