Published
4 months agoon
By
Akkare Newsಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಳದಲ್ಲಿ ಶ್ರೀ ಚಿನ್ಮಯೀ ಮಹಿಳಾ ಭಜನಾ ಮಂಡಳಿ ಪ್ರಾರಂಭೋತ್ಸವ ವು ನಡೆಯಿತು…
ಶ್ರೀಮತಿ ಜಯಶ್ರೀ ರಾಜಗೋಪಾಲ ಭಟ್ ಇವರು ದೀಪ ಬೆಳಗಿ ನೂತನ ಭಜನಾ ಮಂಡಳಿಗೆ ಶುಭ ಹಾರೈಸಿದರು ತದನಂತರ ಕ್ಷೇತ್ರದಲ್ಲಿ ಭಜನಾ ಸೇವೆ ನಡೆದು ಶ್ರೀ ಮಹಿಷಮರ್ದಿನಿ ದೇವಿಗೆ ವಿಶೇಷ ಹೂವಿನ ಪೂಜೆ ಯನ್ನು ಪ್ರಧಾನ ಅರ್ಚಕರಾದ ರಾಮಕೃಷ್ಣ ಭಟ್ ನೆರವೇರಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ನಿರಂಜನ್ ರೈ ಮಠಂತಬೆಟ್ಟು,ಶಿವಪ್ರಕಾಶ್ ನಾಯಕ್ ಮೋನಡ್ಕ, ಜಗನ್ನಾಥ ಶೆಟ್ಟಿ ನಡುಮನೆ,ಸತೀಶ್ ನಾಯಕ್ ಮೋನಡ್ಕ,ಸಂತೋಷ್ ರೈ ಕೆದಿಕಂಡೆ ಗುತ್ತು, ರಮೇಶ್ ನಾಯಕ್ ನಿಡ್ಯ,ಶ್ರೀಕಾಂತ್ ಯಾದವ್,ಗೌತಮ್ ಕುಕ್ಯಾನ್ ಸದಾಶಿವ ಸಾಮಾನಿ ,ಶ್ರೀಮತಿ ರೇಣುಕಾ ರೈ ಮಠಂತಬೆಟ್ಟು, ರಾಧಿಕ ಸಾಮಂತ್ ವಿಜಯಲಕ್ಷ್ಮಿ ನಾಯಕ್ ನಿಡ್ಯ, ರಶ್ಮಿ ರೈ,ಪೂರ್ಣಿಮಾ ಶೆಟ್ಟಿ ಹಾಗೂ ಮುಂತಾದ ಊರ ಭಕ್ತಾದಿಗಳು ಭಾಗವಹಿಸಿದ್ದರು..