ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಅಕ್ಕರೆ ವರದಿ ಇಂಪ್ಯಾಕ್ಟ್: ಪಾಳುಬಿದ್ದ ಕಟ್ಟಡಕ್ಕೆ ಮರುಜೀವ.ಅಕ್ಕರೆ ವರದಿಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ

Published

on

ವಿಟ್ಲ: ಮಕ್ಕಳ ಕಲಿಕಾ ಸೌಕರ್ಯಕ್ಕೆ ಹಾಸ್ಟೆಲ್ ನಿರ್ಮಾಣ ಮಾಡಲೆಂದು ಸರಕಾರ ಸುಮಾರು ಒಂದು ಕೋಟಿಗೂ ಮಿಕ್ಕಿ ಅನುದಾನದಲ್ಲಿ ವಿಟ್ಲದಲ್ಲಿ ಹಾಸ್ಟೆಲ್ ಕಟ್ಟಡಕ್ಕೆ ಅನುದಾನವನ್ನು ನೀಡಿತ್ತು. ಕಟ್ಟಡದ ಕಾಮಗಾರಿಯೂ ನಡೆದಿತ್ತು. ಎಲ್ಲಾ ಕೆಲಸ ಪೂರ್ಣಗೊಂಡು ಕಟ್ಟಡ ಇನ್ನೇನು ಉದ್ಘಾಟನೆಯಾಗಲು ಮಾತ್ರ ಬಾಕಿ ಇತ್ತು. ಚಿಲ್ಲರೆ ಕೆಲಸಗಳು ಮಾತ್ರ ಬಾಕಿ ಇತ್ತು.

ಬಂದ ಹಣ ಮುಗಿಯಿತು ಎಂದು ಕಟ್ಟಡ ನಿರ್ಮಾಣದ ಗುತ್ತಿಗೆದಾರ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿ ಹೋಗಿದ್ದ. ಉದ್ಘಾಟನೆಗೊಳ್ಳಬೇಕಿದ್ದ ಕಟ್ಟಡ ಹಾಗೇ ಮೂರು ನಾಲ್ಕು ವರ್ಷ ಅನಾಥವಾಗಿ ಉಳಿದುಬಿಟ್ಟಿದೆ, ಕಟ್ಟಡದ ಸುತ್ತೆಲ್ಲಾ ಪೊದೆಗಳು, ಮರಗಳು ಬೆಳೆದು ಕಟ್ಟಡವನ್ನು ಸಂಪೂರ್ಣ ಮುಚ್ಚಿ ಹಾಕಿತ್ತು. ಇಲ್ಲಿನ ಅನಾಥ ಕಟ್ಟಡದ ಬಗ್ಗೆ ಮಾಹಿತಿ ಪಡೆದ ಪುತ್ತೂರತಿನ ಅಕ್ಕರೆ ನ್ಯೂಸ್ ತಂಡ ಅಲ್ಲಿಗೆ ತೆರಳಿ ಸವಿಸ್ತಾರವಾದ ವರದಿಯನ್ನು ಸಾರ್ವಜನಿಕರ ಮುಂದಿಟ್ಟಿತ್ತು.

ಈ ವಿಚಾರ ಶಾಸಕ ಅಶೋಕ್ ರೈ ಅವರಿಗೂ ಗೊತ್ತಾಗಿ ಅವರೂ ಭೇಟಿ ನೀಡಿ ಸರಕಾರದ ಅನುದಾನ ಪೋಲಾಗುತ್ತಿರುವ ಬಗ್ಗೆ ಅಧಿಕಾರಿಯನ್ನು ತರಾಟೆಗೆ ಎತ್ತಿಕೊಂಡರು. ವರದಿ ಭಿತ್ತರವಾದ ಮಾರನೇ ದಿನವೇ ಕಟ್ಟಡಕ್ಕೆ ಹೊಸ ರೂಪ ಬಂದಿದೆ.

‘ಅಲ್ಲಿ ಅಷ್ಟೊಂದು ದೊಡ್ಡ ಕಟ್ಟಡವಿದೆ ಎಂಬ ವಿಚಾರ ವಿಟ್ಲದ ಜನತೆಗೆ ಗೊತ್ತಾಗಿದೆ. ಅಧಿಕಾರಿಗಳ, ಶಾಸಕರ ಗಮನ ಸೆಳೆದ ಅಕ್ಕರೆ ನ್ಯೂಸ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್…!

ಈ ಕಟ್ಟಡ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಆಗಬೇಕಿತ್ತು. ಕಟ್ಟಡದ ಕಾಮಗಾರಿ ಅರ್ಧಕ್ಕೆ ಮೊಠಕುಗೊಂಡಿದೆ. ಕಟ್ಟಡವಿಲ್ಲದೆ ಹಾಸ್ಟೆಲ್ ಬಾಡಿಗೆ ಕಟ್ಟಡವೊಂದರಲ್ಲಿ ಕಾರ್ಯಚರಿಸುತ್ತಿದ್ದರೂ ನಿರ್ಮಾಣವಾದ ಕಟ್ಟಡವನ್ನು ಹೇಗಾದರೂ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ಪರಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಯಾಕೆ ಹೊಳೆಯಲಿಲ್ಲ ಎಂಬುದು ಸದ್ಯಕ್ಕೆ ಗೊತ್ತಾಗಲಿಲ್ಲ.

ಅಕ್ಕರೆ ತಂಡ ಈ ನಿಗೂಢ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ವರದಿ ಭಿತ್ತರಗೊಂಡಾಗ ಅಲ್ಲಿನ ಕಟ್ಟಡವನ್ನು ನೋಡಲು ಅನೇಕರು ಭೇಟಿಯನ್ನು ನೀಡಿದ್ದರು. ಮಾಧ್ಯಮಗಳು ಇಂಥಹ ಸುದ್ದಿಯನ್ನು ಬಿತ್ತರಿಸಿ ಅಧಿಕಾರಿಗಳ ಕಣ್ಣು ತೆರೆಸಿದಾಗ ಮಾತ್ರ ಅದರಿಂದ ಜನರಿಗೆ ಪ್ರಯೋಜನವಚಾಗುತ್ತದೆ. ಯಾರ ಕಣ್ಣಿಗೂ ಬೀಳದ್ದು ಅಕ್ಕರೆಯ ಕಣ್ಣಿಗೆ ಬಿದ್ದಿರುವುದು ಇಲ್ಲಿ ಜನರ ಅಚ್ಚರಿಗೆ ಕಾರಣವಾಗಿದೆ.

ಕಾಮಗಾರಿ ಆರಂಭ

ವರದಿ ಭಿತ್ತರವಾದ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ ಕಟ್ಟಡದ ಸುತ್ತ ಬೆಳೆದ ಗಿಡಗಂಟಿಗಳನ್ನು ತೆರವು ಮಾಡಿದ್ದಾರೆ. ಅಲ್ಲಿಗೆ ತೆರಳಲು ರಸ್ತೆಯನ್ನೂ ಮಾಡಿದ್ದಾರೆ.

ಇನ್ನೇನು ಕೆಲವೇ ದಿನದಲ್ಲಿ ಅಳಿದುಳಿದ ಕಾಮಗಾರಿ ಪೂರ್ಣಗೊಳ್ಳಲಿದೆ. ಕಟ್ಟಡಕ್ಕೆ ಹೊಸ ಮೆರುಗು ದೊರೆಯಲಿದೆ. ಮುಂದಿನ ಕೆಲವೇ ತಿಂಗಳಲ್ಲಿ ಕಟ್ಟಡ ಉದ್ಘಾಟನೆಯೂ ಆಗಲಿದೆ. ಇಲ್ಲಿ ನೂರಾರು ಮಕ್ಕಳಿಗೆ ಆಶ್ರಯವೂ ದೊರೆಯಲಿದೆ.

ಮಾಧ್ಯಮವೊಂದರ ವರದಿಯಿಂದಾಗಿ ಪೋಲಾಗುತ್ತಿರುವ ಸರಕಾರದ ಕೋಟಿಗಟ್ಟಲೆ ಅನುದಾನದ ಕಟ್ಟಡ ಸಮಾಜಕ್ಕೆ ಅರ್ಪಣೆಯಾಗಿದೆ ಇದು ಸಮಾಜ ಕಲ್ಯಾಣ ಇಲಾಖೆಗೆ ಕಲ್ಯಾಣವಾದಂತೆಯೂ ಆಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version