ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ದ.ಕ.ಜಿ.ಪಂ. ಹಿರಿಯ ಪ್ರಾರ್ಥಮಿಕ ಶಾಲೆ ಮಣಿಕರ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವರಿಯ ಸಮಿತಿ ರಚನೆ

Published

on

ಮಣಿಕರ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವರಿಯ ಹೊಸ ಸಮಿತಿಯನ್ನ ರಚಿಸಲಾಯಿತು ದ.ಕ.ಜಿ.ಪಂ. ಹಿರಿಯ ಪ್ರಾರ್ಥಮಿಕ ಶಾಲೆ ಮಣಿಕರದಲ್ಲಿ ಹೊಸSDMC ಸಮಿತಿ ರಚನೆಯ ಕುರಿತಾಗಿ ಕರೆದ ಪೋಷಕರ ಸಭೆಯ ಅಧ್ಯಕ್ಷತೆಯನ್ನು SDMC ಯ ಅಧ್ಯಕ್ಷರಾದ ಶ್ರೀ ಅಬ್ದುಲ್ ರಹೀಂ ಇವರು ವಹಿಸಿದ್ದರು.


ಪೋಷಕರ ಸಭೆಯ ಸಭಾ ವೇದಿಕೆಯಲ್ಲಿ ಕೊಳ್ತಿಗೆ ಗ್ರಾಮ ಪಂಚಾಯತಿನ ಸದಸ್ಯರಾದ ಶ್ರೀಮತಿ ಶುಭಲತಾ ಜೆ ಹಾಗೂ ಶ್ರೀ ಸುಂದರ ಪಿ ಬಿ ಇವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ವಿಶಾಲಾಕ್ಷಿ ಕೆ ಸಭೆಯ ಕುರಿತು ಪ್ರಸ್ತಾವಿಕವಾಗಿ ಮಾತನಾಡುತ್ತಾ SDMC ಸಮಿತಿಯ ಸಭೆ ರಚನೆಗೆ ಅನುಸರಿಸಬೇಕಾದ ಆಯ್ಕೆಯ ಮಾನದಂಡಗಳನ್ನು ಸವಿವರವಾಗಿ ಮನದಟ್ಟು ಮಾಡಿದರು.

 


 

ಬಳಿಕ ಪೋಷಕರ ಸಭೆಯಲ್ಲಿ ಶಾಲಾ SDMCಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಶ್ರೀ ಮೊಹಮ್ಮದ್ ಶರೀಫ್ ನೆಟ್ಟಾರ್ ಇವರು ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಶ್ರೀ ಮೋನಪ್ಪ ನಾಗನಮಜಲು ಇವರನ್ನು ಆರಿಸಲಾಯಿತು ‌. ನೂತನವಾಗಿ ಆಯ್ಕೆಗೊಂಡ SDMC ಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ಈ SDMC ರಚನೆಯ ಸಭೆಯಲ್ಲಿ ಶಾಲಾ ಶಿಕ್ಷಕ ವೃಂದ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯಕರ್ತೆ, ಪೋಷಕ ವೃಂದ ಸಹಕರಿಸಿದರು.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version