Published
4 months agoon
By
Akkare Newsಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ ಇದರ ನೇತೃತ್ವದಲ್ಲಿ 41ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೆ.7ರಿಂದ 9ರವರೆಗೆ ಕೋಡಿಂಬಾಡಿಯ ಅಶ್ವತ್ಥಕಟ್ಟೆ ವಠಾರದಲ್ಲಿ ನಡೆಯಲಿದೆ.
ಸೆ.9ರಂದು ಬೆಳಿಗ್ಗೆ ತಿರುಪತಿ ತಿರುಮಲ ಟ್ರಸ್ಟ್ ಮಹಿಳಾ ಭಜನಾ ಮಂಡಳಿ ಬೊಳುವಾರು ಪುತ್ತೂರು ಇವರಿಂದ ಭಜನಾ ಸೇವೆ, ಗಣಹೋಮ, ಅಶ್ವತ್ಥಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ವಿಸರ್ಜನಾ ಪೂಜೆ, ಬಳಿಕ ಶ್ರೀ ಮಹಾಗಣಪತಿಯ ಶೋಭಾಯಾತ್ರೆ ಅಶ್ವತ್ಥಕಟ್ಟೆ ವಠಾರದಿಂದ ಹೊರಟು ಸೇಡಿಯಾಪು, ದಾರಂದಕುಕ್ಕುವರೆಗೆ ಸಾಗಿ ಮರಳಿ ಕೋಡಿಂಬಾಡಿ ವಿನಾಯಕನಗರದಿಂದಾಗಿ ಮಠದಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಳಿಯಿಂದ ಹಿಂತಿರುಗಿ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದವರೆಗೆ ಸಾಗಿ ಶಾಂತಿನಗರದ ಕೆರೆಯಲ್ಲಿ ಶ್ರೀ ಮಹಾಗಣಪತಿ ವಿಗ್ರಹದ ಜಲಸ್ಥಂಭನ ನಡೆಯಲಿದೆ. ಶೋಭಾಯಾತ್ರೆಗೆ ನೆಕ್ಕಿಲಾಡಿ ಅಂಬೆಲದ ಶ್ರೀ ರಾಜಶ್ರೀ ಭಜನಾ ಮಂಡಳಿಯವರ ಕುಣಿತ ಭಜನೆ ಮೆರಗು ನೀಡಲಿದೆ. ಈ ದಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇಡಿಯಾಪು ಒಕ್ಕೂಟದವರು ಸ್ವಯಂಸೇವಕರಾಗಿ ಭಾಗವಹಿಸಲಿದ್ದಾರೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ಅರ್ಚಕ ಬಾಲಕೃಷ್ಣ ಐತಾಳ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದೆ ಎಂದು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೇಶವ ಭಂಡಾರಿ ಕೈಪ, ಗೌರವಾಧ್ಯಕ್ಷ ವಾರಿಸೇನ ಜೈನ್ ಕೋಡಿಯಾಡಿ, ಪ್ರಧಾನ ಕಾರ್ಯದರ್ಶಿ ದೇವಾನಂದ ಕೆ. ಕೋಡಿಂಬಾಡಿ, ಕಾರ್ಯದರ್ಶಿ ಯೋಗೀಶ್ ಸಾಮಾನಿ ಸಂಪಿಗೆದಡಿ, ಕೋಶಾಧಿಕಾರಿ ಭರತ್ ಗೌಡ ನಿಡ್ಯ, ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು, ದೀಕ್ಷಿತ್ ಎಂ.ಎಲ್., ಅಶೋಕ ಪ್ರಭು ದಾರಂದಕುಕ್ಕು, ಉಮೇಶ್ ಪನಿತೋಟ, ದಯಾನಂದ ಪಳ್ಳತ್ತಾರು, ಚೆನ್ನಣ್ಣ ಗೌಡ ಬರೆಮೇಲು, ಶಾರದಾ ಸಿ. ರೈ ಸರೋಳಿ, ಸತೀಶ್ ಮಡಿವಾಳ ಸೇಡಿಯಾಪು, ಚಂದ್ರಶೇಖರ ಕುಲಾಲ್ ಸೇಡಿಯಾಪು, ಶೇಖರ ಪೂಜಾರಿ ನಿಡ್ಯ, ಗೌರವ ಸಲಹೆಗಾರರಾದ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಕೆ. ಬಾಲಕೃಷ್ಣ ಬೋರ್ಕರ್ ಕೂರ್ನಡ್ಕ, ಜಯಾನಂದ ಕೋಡಿಂಬಾಡಿ, ಎ.ಮುರಳೀಧರ ರೈ ಮಠಂತಬೆಟ್ಟು, ಪಿ.ಸಂಕಪ್ಪ ಶೆಟ್ಟಿ ಮಠಂತಬೆಟ್ಟು, ಕುಮಾರನಾಥ ಎಸ್. ಪಳ್ಳತ್ತಾರು, ಯನ್.ಸುಭಾಸ್ ನಾಯಕ್ ನೆಕ್ಕರಾಜೆ, ರಮೇಶ್ ನಾಯಕ್ ನಿಡ್ಯ ಮತ್ತು ನಿರಂಜನ ರೈ ಮಠಂತಬೆಟ್ಟು ತಿಳಿಸಿದ್ದಾರೆ.