Published
3 months agoon
By
Akkare Newsಮಂಗಳೂರು: ಕುದ್ರೋಳಿ ಶ್ರೀ ಗೋರ್ಣನಾಥೇಶ್ವರ ಕ್ಷೇತ್ರದಲ್ಲಿ ಅಕ್ಟೋಬರ್ 3 ರಿಂದ 14 ರವೆಗೆ ಮಂಗಳೂರು ದಸರಾ ನಡೆಯಲಿದ್ದು, ಸಕಲ ಸಿದ್ಧತೆಗಳು ಭರದಿಂದ ಸಾಗಿದೆ. ಈ ಮೂಲಕ ದೇವಸ್ಥಾನದ ವಿದ್ಯುತ್ ದೀಪಗಳ ಅಲಂಕಾರ ಸೇರಿದಂತೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವೈಭವದ ದಸರಾಗೆ ಕುದ್ರೋಳಿ ಸಿದ್ದವಾಗುತ್ತಿದೆ.
ಈ ಸಿದ್ಧತೆಯನ್ನು ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿಯಾಗಿರುವ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರು ವೀಕ್ಷಣೆ ಮಾಡಿದ್ದಾರೆ. ಕ್ಷೇತ್ರದ ಆಡಳಿತ ಸಮಿತಿಯ ಸದಸ್ಯರುಗಳ ಜೊತೆ ಕ್ಷೇತ್ರದಲ್ಲಿ ನಡೆಯುತ್ತಿರುವ ದಸರಾ ಸಿದ್ಧತೆಯ ಬಗ್ಗೆ ಜನಾರ್ದನ ಪೂಜಾರಿ ಮಾಹಿತಿ ಪಡೆದುಕೊಂಡಿದ್ದಾರೆ.
ಗೋಕರ್ಣನಾಥೇಶ್ವರನ ಪೂಜೆ ವೀಕ್ಷಿಸಿದ ಅವರು ಬಳಿಕ ಕ್ಷೇತ್ರದಲ್ಲಿನ ಆಂಜನೇಯ, ಸಾಯಿಬಾಬ ಮಂದಿರದಲ್ಲಿ ಪೂಜೆ ಸಲ್ಲಿಸಿದ್ದಾರೆ. ಜನಾರ್ದನ ಪೂಜಾರಿಯವರು ಆಗಮಿಸಿದ ವೇಳೆ ಕ್ಷೇತ್ರದ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್. ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಜಿ.ಸುವರ್ಣ ಹಾಗೂ ಶ್ರೀ ಗೋಕರ್ಣಥಾ ಸೇವಾದಳದ ಸದಸ್ಯರು ಹಾಜರಿದ್ದರು.