Published
2 months agoon
By
Akkare Newsದೀಪಾವಳಿಯ ಪ್ರಯುಕ್ತ ನ.2ರಂದು 12ನೇ ವರ್ಷದ ವಸ್ತ್ರ ವಿತರಣೆ, ಸಹಬೋಜನ ಕಾರ್ಯಕ್ರಮದ ಜತೆಗೆ ಗೂಡು ದೀಪ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯ ಮಂತ್ರಿಗಳ ಕಾರ್ಯ ಎರಡು ದಿನದಲ್ಲಿ ನಿಶ್ಚಯವಾಗಲಿದ್ದು, ಉಪಮುಖ್ಯ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವರು ಸೇರಿ ಸರ್ಕಾರದ ವಿವಿಧ ಮಂತ್ರಿಗಳು ಭಾಗವಹಿಸುವುದಾಗಿ ತಿಳಿಸಿದ್ದಾರೆ.
ಪುತ್ತೂರು: ದೀಪಾವಳಿಯ ಪ್ರಯುಕ್ತ ನ.2ರಂದು 12ನೇ ವರ್ಷದ ವಸ್ತ್ರ ವಿತರಣೆ, ಸಹಬೋಜನ ಕಾರ್ಯಕ್ರಮದ ಜತೆಗೆ ಗೂಡು ದೀಪ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯ ಮಂತ್ರಿಗಳ ಕಾರ್ಯ ಎರಡು ದಿನದಲ್ಲಿ ನಿಶ್ಚಯವಾಗಲಿದ್ದು, ಉಪಮುಖ್ಯ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವರು ಸೇರಿ ಸರ್ಕಾರದ ವಿವಿಧ ಮಂತ್ರಿಗಳು ಭಾಗವಹಿಸುವುದಾಗಿ ತಿಳಿಸಿದ್ದಾರೆ.
ಈ ಭಾಗದ ಪ್ರಮುಖರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಒಂದು ಗಂಟೆಯ ಸಭಾ ಕಾರ್ಯ ಇರಲಿದ್ದು, ಕೆಲವು ವಲಯದಲ್ಲಿ ಗುರುತಿಸಿಕೊಂಡ ಅತ್ಯಂತ ಬಡ ಕುಟುಂಬಗಳನ್ನು ವಿಶೇಷ ರೀತಿಯಲ್ಲಿ ಸನ್ಮಾನಿಸುವ ಕಾರ್ಯ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ದೀಪಾವಳಿಯ ಸಂದರ್ಭದಲ್ಲಿ ನಡೆಯುವ ವಸ್ತ್ರ ವಿತರಣೆಯ ‘ಅಶೋಕ್ ಜನ-ಮನ 2024’ ಕಾರ್ಯಕ್ರಮದ ಅಂಗವಾಗಿ ಚಪ್ಪರಮುಹೂರ್ತಕ್ಕೆ ಚಾಲನೆ ನೀಡಿ ಮಾತನಾಡಿದರು.