Published
2 months agoon
By
Akkare Newsಪುತ್ತೂರು: ಬೆಳ್ಳಿಪ್ಪಾಡಿ ಫ್ಯಾಮಿಲಿ ಟ್ರಸ್ಟ್ ನ ನೂತನ ಸಮಿತಿ ರಚನಾ ಸಭೆ ಪುತ್ತೂರಿನ ಉದಯಗಿರಿ ಹೋಟೇಲ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಬಿ.ರಮಾನಾಥ ರೈ ಹಾಗೂ ಅಧ್ಯಕ್ಷರಾಗಿ ಬೆಳ್ಳಿಪ್ಪಾಡಿ ಗೋಪಾಲಕೃಷ್ಣ ರೈಯವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ಟ್ರಸ್ಟಿಗಳಾಗಿ ಬಿ.ಗುಣರಂಜನ್ ಶೆಟ್ಟಿ, ಸುಧೀರ್ ಜೆ ಶೆಟ್ಟಿ, ಶಿವಪ್ರಸಾದ್ ಆಳ್ವ, ಸುಭಾಶ್‌ಚಂದ್ರ ಆಳ್ವ, ವಿಜಯಲಕ್ಷ್ಮೀ ಕಾವ, ದಯಾ ವಿ ರೈ, ನವೀನ ಶೆಟ್ಟಿ, ಕಾರ್ತಿಕ್ ರೈ, ಶ್ಯಾಮ್ ಸುಂದರ್ ಅಡ್ಯಂತಾಯ, ಕೃಷ್ಣ ಪ್ರಸಾದ್ ರೈ, ಪ್ರಸಾದ್ ಕೌಶಲ್ ಶೆಟ್ಟಿ, ಡಾ.ಸುಮಂತ್ ಶೆಟ್ಟಿ, ಡಾ.ಸುಶಾಂತ್ ರೈ, ವಿಜಯ್ ರೈ, ನರೇಂದ್ರ ರೈ ಆಯ್ಕೆಯಾಗಿದ್ದಾರೆ.
ಸಭೆಯಲ್ಲಿ ಬೆಳ್ಳಿಪ್ಪಾಡಿ ಕುಟುಂಬಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರ್ವಹಣೆಯನ್ನು ಪ್ರಸಾದ್ ಕೌಶಲ್ ಶೆಟ್ಟಿ ಯವರು ನೆರವೇರಿಸಿದರು.