ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಲಾಖಾ ಮಾಹಿತಿ

ಹೊಸ ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಕೆ ಆರಂಭ

Published

on

ರಾಜ್ಯದಲ್ಲಿ ಹಲವು ಜನ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದು, ಶೀಘ್ರವೇ ಸರ್ಕಾರದಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸೋದಕ್ಕೆ ಆರಂಭ ಮಾಡಲಿದೆ. ಹೀಗಾಗಿ BPL, APL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸೋ ನಿರೀಕ್ಷೆಯಲ್ಲಿದ್ದರೇ ಈ ಕೆಳಗಿನ ದಾಖಲೆಗಳು ಕಡ್ಡಾಯವಾಗಿದೆ.


ಪಡಿತರ ಚೀಟಿ ಪಡೆಯಲು ಇರಬೇಕಾದ ಅರ್ಹತೆ ಏನು?:
* ಹೊಸ ಪಡಿತರ ಚೀಟಿಗಾಗಿ ನವ ದಂಪತಿಗಳು ಅರ್ಜಿ ಸಲ್ಲಿಸಬಹುದು.
* ತಮ್ಮ ಕುಟುಂಬದಿಂದ ಹೊರಗೆ ಉಳಿದು ಪ್ರತ್ಯೇಕವಾಗಿ ವಾಸಿಸುವವರು ಅರ್ಜಿ ಸಲ್ಲಿಸಬಹುದು.(ಹಿಂದಿನ ರೇಷನ್ ಕಾರ್ಡ್ ನಲ್ಲಿ ಹೆಸರು ಇದ್ದರೆ ಅದನ್ನು ತೆಗೆಸಿ ಹಾಕಬೇಕು.)
* ಕುಟುಂಬದ ಆದಾಯದ ಆಧಾರದ ಮೇಲೆ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ (APL/BPL) ಎಂದು ನಿರ್ಧರಿಸಲಾಗುತ್ತದೆ.

ಬೇಕಾಗಿರುವ ದಾಖಲೆಗಳು:
* ಆಧಾರ್ ಕಾರ್ಡ್ (Aadar Card)
* ಖಾಯಂ ನಿವಾಸದ ಪುರಾವೆ (Address Proof)
* ಮೊಬೈಲ್ ಸಂಖ್ಯೆ (Mobile No)
* ಡ್ರೈವಿಂಗ್ ಲೈಸೆನ್ಸ್ (Driving License)
* ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ (Photo)
* ಮತದಾರರ ಗುರುತಿನ ಚೀಟಿ (Voter ID Card)
* ಆದಾಯ ಪ್ರಮಾಣ ಪತ್ರ (Income certificate)
* ಮನೆಯ ಸದಸ್ಯರ ಬಗ್ಗೆ ಮಾಹಿತಿ

 

ರೇಷನ್ ಕಾರ್ಡ್ ಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?:
https://ahara.kar.nic.in/home ಲಾಗಿನ್ (Login) ಆಗಿ
* ಹೊಸ ಸೇರ್ಪಡೆಗೆ ವಿನಂತಿ ಆಯ್ಕೆಯನ್ನು (select) ಕ್ಲಿಕ್ (Click) ಮಾಡಿ
* ಹೊಸ ಪೇಜ್ ನಲ್ಲಿ ಫಾರ್ಮ್ ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿದ ನಂತರ ತಿಳಿಸಲಾದ ಎಲ್ಲ ದಾಖಲೆಗಳನ್ನು ಸ್ಕ್ಯಾನ್ (scan) ಪ್ರತಿಯನ್ನು ಅಪ್‌ ಲೋಡ್ (Upload) ಮಾಡಿ.
* ಅಪ್‌ ಲೋಡ್ ಮಾಡಿದ ನಂತರ ಫಾರ್ಮ್ (Form) ಅನ್ನು ಸಬ್‌ ಮಿಟ್ ಮಾಡಿ
* ಅರ್ಜಿ ಸಲ್ಲಿಸುವ ವೇಳೆ ನೀವು ನೀಡಿರುವಂತಹ ಎಲ್ಲ ದಾಖಲಾತಿಗಳು ಸರಿಯಾಗಿದ್ದರೆ, ನಿಮ್ಮ ಮನೆಗೆ ಹೊಸ ಪಡಿತರ ಚೀಟಿಯನ್ನೂ (New Ration Card Request) ಕಳಿಸಲಾಗುತ್ತದೆ.ಪಡೆಯಬಹುದು.

 

ಕರ್ನಾಟಕ ಪಡಿತರ ಚೀಟಿಗಾಗಿ ಸಹಾಯವಾಣಿ ಸಂಖ್ಯೆ (ಟೋಲ್ ಫ್ರೀ)
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಪಡಿತರ ಚೀಟಿ ಇಲಾಖೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕರ್ನಾಟಕ ಪಡಿತರ ಚೀಟಿ ಸಹಾಯವಾಣಿ ಸಂಖ್ಯೆ ಟೋಲ್ ಫ್ರೀ: 18004259339 ಮತ್ತು ಸಹಾಯವಾಣಿ ಸಂಖ್ಯೆ: 1967 ಗೆ ಕರೆ ಮಾಡಿ ಪಡೆಯಬಹುದಾಗಿದೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version