ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಮಂಗಳೂರು ಪೊಲೀಸ್ ಕಮೀಶನರ್ ವರ್ಗಾವಣೆ ಒತ್ತಾಯಿಸಿ- ಉಡುಪಿಯಲ್ಲಿ ಸಿಪಿಐಎಂ ಮತ್ತು ಸಮಾನ ಮನಸ್ಕ ಸಂಘಟನೆಗಳಿಂದ ಪ್ರತಿಭಟನೆ

Published

on

ಪ್ರತಿಭಟನೆ ಧರಣಿಗಳಿಗೆ ಅನುಮತಿ ನಿರಾಕರಣೆ ಮಾಡುವುದು ,ಸಿಪಿಐಎಂ ಮುಖಂಡರ ಮೇಲೆ ಹಾಗೂ ಜನಪರ ಸಂಘಟನೆಯ ಮುಖಂಡರ ಮೇಲೆ ಮೊಕದ್ದಮೆ ಹೂಡುವುದು, ಸಂವಿಧಾನದ ಹಕ್ಕುಗಳನ್ನು ದಮನಿಸಲು ಹೊರಟ, ಬಿ.ಜೆ.ಪಿ. ಸಂಘಪರಿವಾರದ ಬೆಂಗಾವಲಾಗಿ ನಿಂತಿರುವ ಮಂಗಳೂರು ಪೊಲೀಸ್ ಕಮೀಶನರ್ ಅನುಪಮ್ ಅಗರವಾಲ್ ವರ್ಗಾವಣೆ ಒತ್ತಾಯಿಸಿ ಉಡುಪಿಯ ಅಜ್ಜರಕಾಡು ಹುತಾತ್ಮರ ಸ್ಮಾರಕ ಬಳಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಒತ್ತಾಯಿಸಿಸಲಾಯಿತು.

ಮುಖ್ಯಮಂತ್ರಿ ಹಾಗೂ ಗ್ರಹ ಸಚಿವರು ಕೂಡಲೆ ಸಿಪಿಐಎಂ ಮುಖಂಡರ ಮೇಲೆ ಹಾಕಿರುವ ಕೇಸನ್ನು ವಾಪಾಸು ಪಡೆಯಬೇಕು, ಅಕ್ರಮ ಮರಳುಗಾರಿಕೆ, ಬೆಟ್ಟಿಂಗ್, ಮಸಾಜ್ ಪಾರ್ಲರ್ ದಂಧೆಕೋರರನ್ನು ಬಂಧುಗಳಂತೆ ನೋಡುವ ಮಂಗಳೂರು ಪೊಲೀಸ್ ಕಮೀಶನರ್ ಅನುಪಮ್ ಅಗರವಾಲ್ ಕೂಡಲೇ ತನಿಖೆಗೆ ಒಳಪಡಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ತೀವ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಲಾಯಿತು..

 

ಪ್ರತಿಭಟನೆಯಲ್ಲಿ ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಉಡುಪಿ ವಲಯ ಕಾರ್ಯದರ್ಶಿ ಶಶಿಧರ ಗೋಲ್ಲ, ಜಿಲ್ಲಾ ಸಮಿತಿ ಸದಸ್ಯರಾದ ಕವಿರಾಜ್. ಎಸ್.ಕಾಂಚನ್, ವೆಂಕಟೇಶ್ ಕೋಣಿ, ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಸಂಚಾಲಕರಾದ ಸಂಜೀವ ಬಳ್ಕೂರ್, ಡಿ.ಎಸ್.ಎಸ್. ಸಂಘಟನೆಯ ರಾಜ್ಯ ಸಂಚಾಲಕರಾದ ಸುಂದರ್ ಮಾಸ್ತರ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮುಖಂಡರಾದ ಇದ್ರೀಸ್ ಹೂಡೆ, ಅಜೀಜ್ ಉದ್ಯಾವರ, ನಾಸೀರ್ ಕಾಪು, ಸಮಾನ ಮನಸ್ಕ ಸಂಘಟನೆ ಮುಖಂಡರಾದ ಕೃಷ್ಣ, ಸಂವರ್ಥ ಸಾಹಿಲ್, ದಯಾನಂದ ಕೋಟ್ಯಾನ್, ಸಿಪಿಐಎಂ ಮುಖಂಡರಾದ ನಳಿನಿ.ಎಸ್, ಸೈಯಾದ್ ಅಲಿ, ರಮೇಶ್‌ ಉಡುಪಿ, ಮೋಹನ್, ಸದಾಶಿವ ಪೂಜಾರಿ, ಮುರಳಿ, ರಮೇಶ್ ಶೇರಿಗಾರ ಮುಂತಾದವರು ಉಪಸ್ಥಿತರಿದ್ದರು

 

 

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version