ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಮಕರವಿಳಕ್ಕು– 2025: ಅಯ್ಯಪ್ಪ ಭಕ್ತರಿಗೆ ಮಕರ ಜ್ಯೋತಿ ದರ್ಶನ, ಎಲ್ಲೆಲ್ಲೂ ಶರಣಂ ಅಯ್ಯಪ್ಪ ಘೋಷ ವಾಕ್ಯ

Published

on

ಮಕರವಿಳಕ್ಕು  2025– ಕೇರಳದ ಪ್ರಸಿದ್ಧ  ಯಾತ್ರಾಸ್ಥಳ ಶಬರಿಮಲೆಯ ಬೆಟ್ಟದ ತುದಿಯಲ್ಲಿ ನಿನ್ನೆ ಜ 14 ಸಂಜೆ 6:45ರ ಸುಮಾರಿಗೆ ಮಕರ ಜ್ಯೋತಿ ದರ್ಶನವನ್ನು ಕೋಟ್ಯಂತರ ಅಯ್ಯಪ್ಪ ಭಕ್ತರು ಪಡೆದರು. ಸಂಕ್ರಾಂತಿ ದಿನವಾದ  ಅಯ್ಯಪ್ಪ ಭಕ್ತರು ಮಕರ ಜ್ಯೋತಿ ಸ್ವರೂಪವಾದ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದರು.

ಸಂಜೆಯ ವೇಳೆ ಮಕರ ಜ್ಯೋತಿ ದರ್ಶನವಾಗುತ್ತಿದ್ದಂತೆಯೇ, ಹೋ ಎಂದು ಉದ್ಘಾರ ಹಾಕಿದ ಸ್ವಾಮಿಗಳು, ಸ್ವಾಮಿಯೇ ಶರಣಂ  ಅಯ್ಯಪ್ಪ ಘೋಷ ವಾಕ್ಯ ಕೂಗಿ ಶರಣು ಕರೆದರು. ಮಕರ ಜ್ಯೋತಿ ದರ್ಶನದಿಂದ ಭಕ್ತರ ಖುಷಿಗೆ ಪಾರವೇ ಇರಲಿಲ್ಲ.

ಮೂರು ಬಾರಿ ಮಕರ ಜ್ಯೋತಿ ದರ್ಶನವಾಯಿತು. ಭಕ್ತರ ಸಂಭ್ರಮ ಮೇರೆಮೀರಿತ್ತು. ಪೊನ್ನಂಬಲಮೇಡುವಿನಲ್ಲಿ ಮಕರ ಜ್ಯೋತಿ ದರ್ಶನವಾಯಿತು. ಈ ಪ್ರದೇಶ ಶಬರಿ ಮಲೆಯಿಂದ 4 ಕಿ.ಮೀ. ದೂರದಲ್ಲಿದೆ. ಸೂರ್ಯನು ಮಕರ ರಾಶಿಗೆ ಸಂಚರಿಸುವ ಸಮಯದಲ್ಲಿ ಜ್ಯೋತಿ ದರ್ಶನವಾಗುತ್ತಿರುವುದು ಹಿಂದೂ ಧರ್ಮೀಯರಿಗೆ ವಿಶೇಷವಾಗಿದೆ.

ಮಕರ ಜ್ಯೋತಿಯ ದರ್ಶನಕ್ಕಾಗಿಯೇ ಲಕ್ಷಾಂತರ  ಅಯ್ಯಪ್ಪ ಮಾಲಾಧಾರಿಗಳು ಪ್ರತಿ ವರ್ಷವೂ ಸಾವಿರಾರು ಕಿ.ಮೀ. ದೂರದಿಂದ ಆಗಮಿಸುತ್ತಾರೆ. ಶಬರಿ ಮಲೆಗೆ ಆಗಮಿಸುವ ಎಲ್ಲ ಭಕ್ತರ ಉದ್ದೇಶವೂ ಮಕರ ಜ್ಯೋತಿಯ ದರ್ಶನ ಮಾಡುವುದೇ ಆಗಿದೆ.

 

ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಭಾರತದ ನಾನಾ ಭಾಗಗಳಿಂದಲೂ ಮಾಲಾಧಾರಿ ಅಯ್ಯಪ್ಪ ಭಕ್ತರು ಆಗಮಿಸಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version