Published
3 weeks agoon
By
Akkare News(ಮಾ.19) ತಾಂತ್ರಿಕ ದೋಷದ ಕಾರಣ ಬಾಹ್ಯಾಕಾಶದಲ್ಲೇ ಕಳೆದ 9 ತಿಂಗಳು ಕಳೆದ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ನಾಸಾ ಹಾಗೂ ಸ್ಪೇಸ್ ಎಕ್ಸ್ ಜಂಟಿಯಾಗಿ ಭೂಮಿಗೆ ಕರೆತಂದಿದೆ. ಸ್ಪೇಸ್‌ಎಕ್ಸ್ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್ ನೌಕೆ ಮೂಲಕ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ಮರಳಿದ್ದಾರೆ.
ಇದೀಗ ನೌಕೆಯನ್ನು ನಾಸಾ ಸಿಬ್ಬಂದಿಗಳ ತಂಡ ಸಮುದ್ರದಿಂದ ಮೇಲಕ್ಕೆತ್ತಲಾಗಿದೆ. ಶೀಘ್ರದಲ್ಲೇ ನೌಕೆಯಿಂದ ಹೊರಬರಲಿರುವ ಸುನೀತಾ ವಿಲಿಯಮ್ಸ್ ಹಾಗೂ ಇತರ ಗಗನಯಾತ್ರಿಗಳ ತಪಾಸಣೆ ನಡೆಯಲಿದೆ.
ಸಮುದ್ರದಲ್ಲಿ ಇಳಿಯುತ್ತಿದ್ದಂತೆ ತ್ವರಿತ ಕಾರ್ಯಾಚರಣೆ
ಸುನೀತ್ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಹೊತ್ತು ಬಂದು ನೌಕೆ ಫ್ಲೋರಿಡಾದಲ್ಲಿರುವ ಅಟ್ಲಾಂಟಿಕ್ ಸಮುದ್ರದಲ್ಲಿ ಇಳಿದಿತ್ತು. ನೌಕೆ ಸಮುದ್ರದಲ್ಲಿ ಇಳಿಯುತ್ತಿದ್ದಂತೆ ನಾಸಾ ಸಿಬ್ಬಂದಿಗಳು, ಸ್ಪೇಸ್ ಎಕ್ಸ್ ಸಿಬ್ಬಂದಿಗಳು, ವಿಶೇಷ ಹಡುಗು, ರಕ್ಷಣೆಗೆ ಧಾವಿಸಿದೆ. ಮಳುಗು ತಜ್ಞರು ಸೇರಿದಂತೆ ಹಲವು ಸಿಬ್ಬಂದಿಗಳು ಬಾಹ್ಯಾಕಾಶ ನೌಕೆಯನ್ನು ರಕ್ಷಣಾ ಹಡಗಿನ ಮೂಲಕ ರಕ್ಷಿಸಿದ್ದಾರೆ. ಬಳಿಕ ನೌಕೆಯ ಹ್ಯಾಚ್ ತೆಗೆದು ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಹೊರತರರಲಾಗುತ್ತದೆ. ಕಳೆದ 9 ತಿಂಗಳು ಗುರುತ್ವಾಕರ್ಷ ಬಲವಿಲ್ಲದೆ ಕಳೆದ ಗಗನಯಾತ್ರಿಗಳು ಭೂಮಿ ಮೇಲೆ ಗುರುತ್ವಾಕರ್ಷಣೆಗೆ ಸಿಲುಕಿಕೊಂಡಾಗ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ.
8 ದಿನದ ಮಿಷನ್ 9 ತಿಂಗಳಿಗೆ ವಿಸ್ತರಣೆ
ಬೋಯಿಂಗ್ ಸ್ಟಾರ್‌ಲೈನರ್ ನೌಕೆ ಮೂಲಕ 8 ದಿನಗಳ ಅಧ್ಯಯನ ಮಿಷನ್‌ಗಾಗಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಬಾಹ್ಯಾಕಾಶಕ್ಕೆ ತೆರಳಿದ್ದರು. ಜೂನ್ 5 ರಂದು ನೌಕೆ ಉಡಾವಣೆಗೊಂಡಿತ್ತು. ನಾಸಾ ವೇಳಾಪಟ್ಟಿ ಪ್ರಕಾರ ಜೂನ್ 14 ರಂದು ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ಮರಳಬೇಕಿತ್ತು. ಆದರೆ ಬೋಯಿಂಗ್ ಸ್ಟಾರ್‌ಲೈನ್ ನೌಕೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಹೀಲಿಯಂ ಸೋರಿಕೆ ಸರಿಪಡಿಸುವ ಪ್ರಯತ್ನಗಳು ನಡೆದಿತ್ತು. ಹೀಗಾಗಿ ಗಗನಯಾತ್ರಿಗಳು ಮರಳುವ ದಿನಾಂಕ ಹಂತ ಹಂತವಾಗಿ ಮುಂದೂಡುತ್ತಲೇ ಹೋಗಿತ್ತು.
ಆಗಸ್ಟ್ 24ರಂದು ಸ್ಟಾರ್‌ಲೈನರ್ ಭೂಮಿಗೆ ಮರಳಿತ್ತು. ಆದರೆ ಗಗನಯಾತ್ರಿಗಳು ಪ್ರಯಾಣಿಸುವಂತಿರಲಿಲ್ಲ. ಹೀಗಾಗಿ ಮರಳುವಿಕೆ ಮತ್ತಷ್ಟು ವಿಳಂಬಗೊಂಡಿತು. ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಜೊತೆ ಸೇರಿ ನಾಸಾ ಮಾರ್ಚ್ ತಿಂಗಳಲ್ಲಿ ಗನನಯಾತ್ರಿಗಳ ಕರೆತರಲು ಪ್ಲಾನ್ ಮಾಡಿತ್ತು. ಇದರಂತೆ ಇದೀಗ ಇಬ್ಬರು ಗನನಯಾತ್ರಿಗಳು ಭೂಮಿಗೆ ಲ್ಯಾಂಡ್ ಆಗಿದ್ದಾರೆ.